ಹೊಸಗನ್ನಡದ ಮುಂಗೋಳಿ ಎಂದೇ ಖ್ಯಾತವಾದ ಮುದ್ದಣ ಅಥವಾ ನಂದಳಿಕೆಯ ಲಕ್ಷ್ಮೀನಾರಾಯಣಯ್ಯನವರ ಕುರಿತು ವರ್ಷಕಾಲ ಮಂಗಳೂರು ಆಕಾಶವಾಣಿ ನಡೆಸಿದ ವಿವಿಧ ಕಾರ್ಯಕ್ರಮಗಳ ಮಾಲಿಕೆಯಲ್ಲಿ, ಎರಡು ಕಂತುಗಳಲ್ಲಿ ಮೂಡಿ ಬಂದ ಮುದ್ದಣ ಕವಿಯ ಜೀವನ ಮತ್ತು ಕೃತಿಯಾಧಾರಿತ ಧ್ವನಿ ವಾಹಿನಿ: ‘ಮುದ್ದಣ ಕಾಲಂ’

ರೂಪಕದ ನಿರ್ಮಾಣ – ಶರಭೇಂದ್ರ ಸ್ವಾಮಿ, ಸಾಹಿತ್ಯ – ಕೆ. ಮಹಾಲಿಂಗ ಭಟ್. ಧ್ವನಿ ವೈವಿಧ್ಯದಲ್ಲಿ: ಕಾಲಪುರುಷ – ಚಿನ್ನಾ ಕಾಸರಗೋಡು, ನಿರೂಪಕ – ಆರ್. ನರಸಿಂಹ ಮೂರ್ತಿ, ನಿರೂಪಕಿ – ಶ್ರೀಕಲಾ ಉಡುಪ, ಮುದ್ದಣ – ನಾ ದಾಮೋದರ ಶೆಟ್ಟಿ, ಮನೋರಮೆ ಮತ್ತು ಮಂಡೋದರಿ – ಸರೋಜಿನಿ ಶೆಟ್ಟಿ, ಮಳಲಿ ಸುಬ್ಬರಾವ್ – ಸಂಪೂರ್ಣಾನಂದ ಬಳ್ಕೂರು, ರಾವಣ, ಪರ್ವತ – ಹರೀಶ ಪೇಜಾವರ, ನಾರದ – ಶರಭೇಂದ್ರ ಸ್ವಾಮಿ, ಭಾವಗಾನ – ಚಂದ್ರಶೇಖರ ಕೆದ್ಲಾಯ ಹಾಗೂ ಮಂಜುಳ ಸುಬ್ರಹ್ಮಣ್ಯ, ಸಹಾಯ: ಅರವಿಂದ ಕುಡ್ಲ.