ದಾಖಲೀಕರಣದ ಕಥೆ

ಕರ್ನಾಟಕದಲ್ಲಿ ಒಳ್ಳೆಯ ರಂಗಪ್ರಯೋಗಗಳಿಗೆ ದೊಡ್ಡ ಪರಂಪರೆಯೇ ಇದೆ. ಆದರೆ ಇಲ್ಲಿ ಹೆಚ್ಚಿನವು ಸರಿಯಾದ ವೀಡಿಯೋ ದಾಖಲೀಕರಣ ಇಲ್ಲದಿರುವುದರಿಂದ, ಆಗಿರುವ ಅಲ್ಪ-ಸ್ವಲ್ಪ ಪ್ರಯೋಗಗಳನ್ನು ಸರಿಯಾಗಿ ಸಂಗ್ರಹಿಸಿಟ್ಟಿಲ್ಲದ ಕಾರಣ, ಇಂದು ಅವು ಅಲಭ್ಯ. ಇದನ್ನು ಮನಗಂಡು ಸಂಚಿ ಫೌಂಡೇಷನ್ ಕರ್ನಾಟಕದ ಅತಿಮುಖ್ಯ ರಂಗ ಸಂಸ್ಥೆಯಾದ ನೀನಾಸಮ್ ಜೊತೆ ಸೇರಿಕೊಂಡು ದಾಖಲೀಕರಣಕ್ಕೆ ಒಂದು ಯೋಜನೆಯನ್ನು ರೂಪಿಸಿತು. ಈ ಯೋಜನೆಯ ಪ್ರಕಾರ ಹಲವು ಕ್ಯಾಮರಾಗಳನ್ನು ಬಳಸಿ ನಾಟಕವನ್ನು ಚಿತ್ರೀಕರಿಸಿ ಸಂಕಲನ ಮಾಡುವುದು ಈ ಯೋಜನೆಯ ಒಂದು ಉದ್ದೇಶವಾಗಿದ್ದರೆ, ಜೊತೆಯಲ್ಲೇ, ಇನ್ನೂ ಅನೇಕ ವಿಷಯಗಳನ್ನು ಈ ದಾಖಲೀಕರಣ ಹೊಂದಿರುತ್ತದೆ. ಈ ದಾಖಲೀಕರಣದೊಂದಿಗೆ, ಇಂಗ್ಲೀಷ್ ಉಪಶೀರ್ಷಿಕೆಯನ್ನೂ ಕೊಡಲಾಗುತ್ತದೆ ಹಾಗೂ ನಾಟಕದ ನಿರ್ದೇಶಕರ ಸಂದರ್ಶನವನ್ನೂ ಕೊಡಲಾಗುತ್ತದೆ. ನೀನಾಸಮ್ ಸಂಬಂಧಿಸಿದ ಹಿನ್ನೆಲೆಯ ಮಾತುಕಥೆಗಳೂ ಇಲ್ಲಿ ನಿಮಗೆ ಸಿಗುತ್ತವೆ. ನಾಟಕದ ದಾಖಲೀಕರಣದ ಜೊತೆಯಲ್ಲೇ ಒಂದು ಸಂಶೋಧನೆಗಳಿಗೆ ಆಕರವಾಗಿಯೂ, ಇದು ಸಿದ್ಧವಾಗಿದೆ. ಸಂಚಿ ಫೌಂಡೇಶನ್ ಈ ದಾಖಲೀಕರಣವನ್ನು ಕ್ರಿಯೇಟಿವ್ ಕಾಮನ್ಸ್ ಮೂಲಕ ಉಚಿತವಾಗಿ ಸಾರ್ವಜನಿಕ ಬಳಕೆಗಾಗಿ ಇಡುತ್ತಿದೆ. ಈ ಮೊದಲ ಹೆಜ್ಜೆಯ ಮೂಲಕ ಮುಂದೆ ಇನ್ನಷ್ಟು ಕನ್ನಡ ನಾಟಕಗಳ ದಾಖಲೀಕರಣಕ್ಕೆ ಸಂಚಿ ಫೌಂಡೇಶನ್ ತಯಾರಾಗುತ್ತಿದೆ. ಕನ್ನಡ ನಾಟಕಗಳ ದಾಖಲೀಕರಣದ ಮೂಲಕ ಕನ್ನಡ ನಾಟಕ ಕನ್ನಡಿಯಾಗಿ ಈ ಯೋಜನೆ ನಡೆಯಬೇಕೆನ್ನುವುದೇ ಸಂಚಿಯ ಉದ್ದೇಶವಾಗಿದೆ.

ನೀನಾಸಮ್

ನೀನಾಸಮ್ ಹೆಗ್ಗೋಡು ಭಾರತದ ಶ್ರೇಷ್ಟ ನಾಟಕಶಾಲೆಗಳಲ್ಲಿ ಒಂದು. ಇದು ಇಂದು ಕೇವಲ ಒಂದು ರಂಗಶಾಲೆಯಲ್ಲದೇ, ಅನೇಕ ಜ್ಞಾನಶಾಖೆಗಳಿಗೆ ತನ್ನ ಚಟುವಟಿಕೆಗಳನ್ನು ವಿಸ್ತರಿಸಿಕೊಂಡಿದೆ. ಹಲವು ದಶಕಗಳಿಂದ ಚಿಂತಕರು, ತತ್ವಜ್ಞಾನಿಗಳು, ರಂಗಕರ್ಮಿಗಳು, ಕಲಾವಿದರು, ಸಿನೆಮಾ ನಿರ್ದೇಶಕರು ಹೀಗೆ ಸಾಂಸ್ಕೃತಿಕ ವಲಯದ ಹತ್ತು ಹಲವು ಕ್ಷೇತ್ರಗಳನ್ನು ತಟ್ಟಿ, ಜನರನ್ನು ಪ್ರಭಾವಿಸಿದೆ, ಒಂದು ಜಾಗ್ರತ ಸಮುದಾಯದ ಹುಟ್ಟಿಗೆ ಕಾರಣವಾಗಿದೆ. ನೀನಾಸಮ್ ‘ತಿರುಗಾಟ’ ಹೆಸರಿನಲ್ಲಿ ಒಂದು ಸಂಚಾರಿ ರಂಗ ತಂಡದ ಸಮೃದ್ಧ ಇತಿಹಾಸವನ್ನೂ ಹೊಂದಿದೆ. ಇದು ಭಾರತದ ರಂಗ ಇತಿಹಾಸದಲ್ಲೇ ಅನೇಕ ಅಪೂರ್ವ ಪ್ರದರ್ಶನಗಳನ್ನು ಕೊಟ್ಟಂಥಾ ತಂಡ. ಎರಡು ದಶಕಕ್ಕೂ ಮೀರಿ ಕೆಲಸ ಮಾಡಿತ್ತಿರುವ ತಿರುಗಾಟ ಪ್ರತಿ ವರ್ಷ ನೂರಾರು ಪ್ರದರ್ಶನಗಳನ್ನು ಕೊಡುತ್ತಾ ಬಂದಿದೆ. ಕಳೆದ ಈ ವರ್ಷಗಳಲ್ಲೂ ನೀನಾಸಮ್ ನಾಟಕಗಳ ಛಾಯಾಚಿತ್ರಗಳ ಸಂಗ್ರಹ ಅಷ್ಟೋ ಇಷ್ಟೋ ಆಗಿದ್ದರೂ, ಒಂದಿಷ್ಟು ಬರವಣಿಗೆಗಳಿದ್ದರೂ, ವೀಡಿಯೋ ದಾಖಲೀಕರಣ ಶಾಸ್ತ್ರೀಯವಾಗಿ ಆಗಲೇ ಇಲ್ಲ ಎನ್ನಬಹುದು. ಈಗ ತಂತ್ರಜ್ಞಾನದ ಫಲವನ್ನು ಸಮರ್ಥವಾಗಿ ಬಳಸಿಕೊಂಡು ನಾಟಕಗಳನ್ನು ದಾಖಲೀಕರಿಸುವ ಸಂಚಿಯ ಆಶಯಕ್ಕೆ ನೀನಾಸಮ್ ತುಂಬು ಹೃದಯದಿಂದ ಸಹಭಾಗಿಯಾಗಿದೆ.

ನೀನಾಸಮ್ ಬಳಗ

೧೯೪೯ರಲ್ಲಿ ಆರಂಭವಾದ ನೀನಾಸಮ್ ಇಂದು ಹಲವು ಜ್ಞಾನಶಾಖೆಗಳಿಗೆ ಹಬ್ಬಿ ನಿಂತಿದೆ. ಅದರ ಒಂದು ಅತ್ಯಂತ ಪ್ರಮುಖ ಹಾಗೂ ಹಳೆಯ ಶಾಖೆ, ಸ್ಥಳೀಯ ನಾಟಕ ತಂಡ. ನಾಟಕದಲ್ಲಿ ಆಸಕ್ತಿಯಿರುವ ಸ್ಥಳೀಯರು ಜೊತೆ ಸೇರಿ ಆರಂಭದ ದಿನಗಳಿಂದಲೂ ಸರಾಸರಿ ವರ್ಷಕ್ಕೆ ಒಂದರಂತೆ ನಾಟಕಗಳನ್ನು ಅಭ್ಯಸಿಸಿ ಪ್ರದರ್ಶಿಸುತ್ತಾ ಬಂದಿದ್ದಾರೆ. ‘ಷಹಜಹಾನ್’, ‘ಸಂಗ್ಯಾ ಬಾಳ್ಯಾ’, ‘ಚೋಮನ ದುಡಿ’, ‘ಘಾಸೀರಾಮ್ ಕೋತ್ವಾಲ್’, ‘ತಾಮ್ರ ಪತ್ರ’, ‘ಸಾಹೇಬರು ಬರುತ್ತಾರೆ’, ‘ಹ್ಯಾಮ್ಲೆಟ್’, ‘ಜೋಕುಮಾರ ಸ್ವಾಮಿ’, ‘ಕೆಂಪು ಕಣಗಿಲೆ’, ‘ಮಂತ್ರಶಕ್ತಿ’, ‘ನೂರ್ಜಹಾನ್’, ‘ವೆನಿಸ್ಸಿನ ವ್ಯಾಪಾರಿ’, ತಲಕಾಡುಗೊಂಡ’, ‘ಕ್ರಮವಿಕ್ರಮ’, ‘ಚೆರ್ರಿ ತೋಪು’, ‘ಸದ್ದು, ವಿಚಾರಣೆ ನಡೆಯುತ್ತಿದೆ’, ‘ಲಿಯರ್ ಲಹರಿ’, ‘ಆಕಾಶ ಬುಟ್ಟಿ’, ‘ಅಗಲಿದ ಅಲಕೆ’, ‘ಶಿಶಿರ ವಸಂತ’ ಇತ್ಯಾದಿ ಅನೇಕ ಪ್ರಮುಖ ನಾಟಕಗಳು ಈ ತಂಡದ ಮೂಲಕ ಪ್ರದರ್ಶಿತವಾಗಿವೆ.

ನಾಟಕಗಳನ್ನು ಸ್ಥಳೀಯ ನಿರ್ದೇಶಕರು ನಿರ್ದೇಶಿಸುವುದಲ್ಲದೇ, ಅನೇಕ ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರಖ್ಯಾತಿಯ ಬಿ.ವಿ ಕಾರಂತ, ಚಂದ್ರಶೇಖರ ಕಂಬಾರ, ಪ್ರಸನ್ನ, ಪ್ರಕಾಶ್ ಬೆಳವಾಡಿ, ರಘುನಂದನ, ಚನ್ನಕೇಶವ ಇತ್ಯಾದಿ ಅನೇಕ ನಿರ್ದೇಶಕರು ನಿರ್ದೇಶಿಸಿದ್ದಾರೆ. ಈ ನಾಟಕಗಳು ಸಾಮಾನ್ಯವಾಗಿ ಹೆಗ್ಗೋಡಿನಲ್ಲಿ ಮತ್ತು ಸುತ್ತಲಿನ ಕೆಲವಾರು ಸ್ಥಳಗಳಲ್ಲಿ ಪ್ರದರ್ಶನಗೊಳ್ಳುತ್ತದೆ. ಇದಲ್ಲದೇ ಕರ್ನಾಟಕದ ಅನೇಕ ಭಾಗಗಳಲ್ಲೂ ಹಲವು ಪ್ರದರ್ಶನಗಳು ಆಗಿವೆ.

ತಿರುಗಾಟ

೧೯೮೫ರಲ್ಲಿ ಆರಂಭವಾದ ನೀನಾಸಮ್ ಸಂಸ್ಥೆಯ ನಾಟಕ ತಂಡವೇ ‘ತಿರುಗಾಟ’. ನೀನಾಸಮ್ ರಂಗ ಶಿಕ್ಷಣ ಕೇಂದ್ರದಿಂದ ತರಬೇತು ಹೊಂದಿದ ಸುಮಾರು ೨೦ ಕಲಾವಿದರ ತಂಡ ಪ್ರತಿ ವರ್ಷ ಸುಮಾರು ಜುಲೈ ತಿಂಗಳಲ್ಲಿ ರೂಪಿಸಲಾಗುತ್ತದೆ. ಈ ತಂಡವು ಆ ವರ್ಷಕ್ಕೆ ನಿಗದಿಪಡಿಸಿದ ನಾಟಕವನ್ನು ಅಭ್ಯಾಸ ಮಾಡಿಕೊಂಡು ಮುಂದಿನ ಮಾರ್ಚ್ ತಿಂಗಳವರೆಗೂ ರಾಜ್ಯಾದ್ಯಂತ ಸಂಚಾರ ಮಾಡುತ್ತದೆ. ಸುಮಾರು ನಾಲ್ಕು ತಿಂಗಳ ಈ ಸಂಚಾರದಲ್ಲಿ ಸರಾಸರಿ ೫೦-೧೦೦ ಕಿಲೋಮೀಟರ್ ದೂರದಲ್ಲಿ ಒಂದರಂತೆ ಪ್ರದರ್ಶನವನ್ನು ನೀಡುತ್ತಾ ಸಾಗುತ್ತದೆ. ಬಹುತೇಕ ಪ್ರತಿ ದಿನ ಎನ್ನುವಂತೆ ಸುಮಾರು ೧೪೦ ದಿನಗಳ ಕಾಲಾವಧಿಯಲ್ಲಿ ೧೨೦ ಪ್ರದರ್ಶನವನ್ನು ತಂಡವು ನೀಡುತ್ತದೆ. ‘ತಿರುಗಾಟ’ವು ಈವರೆಗೆ ೮೫ಕ್ಕೂ ಮಿಕ್ಕು ನಾಟಕಗಳನ್ನು ೩೪೦೦ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಪ್ರದರ್ಶಿಸಿದೆ. ಈವರೆಗೆ ೨೦ ಲಕ್ಷಕ್ಕೂ ಮೀರಿ ಪ್ರೇಕ್ಷಕರನ್ನು ತಲುಪಿದ ಹಿರಿಮೆ ‘ತಿರುಗಾಟ’ದ್ದು! ತಿರುಗಾಟದ ಮತ್ತೊಂದು ಹೆಮ್ಮೆಯ ವಿಷಯ ಎಂದರೆ, ಅದರ ೮೦% ಪ್ರದರ್ಶನಗಳು ಸಣ್ಣ ಊರು ಅಥವಾ ಹಌಗಳಲ್ಲೇ ಆಗಿವೆ. ಹೀಗಾಗಿ ಕರ್ನಾಟಕದ ಪ್ರತಿಯೊಂದು ಜಿಲ್ಲೆಯನ್ನೂ ಪ್ರತಿವರ್ಷವೂ ತಲುಪುತ್ತಿದೆ ‘ತಿರುಗಾಟ’. ಈ ತಂಡಕ್ಕೆ ಆಯ್ಕೆ ಮಾಡುವ ನಾಟಕಗಳು ಪಾಶ್ಚಾತ್ಯ, ಭಾರತೀಯ ಹಾಗೂ ಕನ್ನಡ ಈ ಮೂರರಲ್ಲಿ ಎರಡಾದರೂ ಇರುವಂತೆ ನೋಡಿಕೊಳ್ಳಲಾಗುತ್ತದೆ. ಈ ನಾಟಕಗಳನ್ನು ಕರ್ನಾಟಕ ಅಥವಾ ಕರ್ನಾಟಕದ ಹೊರಗಿನಿಂದ ಆಹ್ವಾನಿಸಲಾದ ನಿರ್ದೇಶಕರು ನಿರ್ದೇಶಿಸುತ್ತಾರೆ.

Ninasam Plays Documentation

ಗುಣಮುಖ ನೋಡಲು ಕ್ಲಿಕ್ಕಿಸಿ
Gunamukha
ತಾರ್ತೂಫ್ ನೋಡಲು ಕ್ಲಿಕ್ಕಿಸಿ
Tartuffe
ಒರೆಸ್ತಿಸ್ ಪುರಾಣ ನೋಡಲು ಕ್ಲಿಕ್ಕಿಸಿ
Oresthis

ಸಂಚಿಯನ್ನು ಬೆಂಬಲಿಸಿ

ನಮಗೆ ನಿಮ್ಮ ಸಹಾಯ ಬೇಕಾಗಿದೆ. ಸಂಚಿ ಫೌಂಡೇಶನ್ನಿಗೆ ನೀಡುವ ಎಲ್ಲಾ ದೇಣಿಗೆಗಳಿಗೆ ಆದಾಯ ತೆರಿಗೆಯಲ್ಲಿ ೮೦ಜಿ ವಿನಾಯಿತಿ ಇರುತ್ತದೆ.

ಸಮುದಾಯದ ಸಹಭಾಗಿತ್ವ

ಸಂಚಿ ಫೌಂಡೇಶನ್ ಸಮುದಾಯದ ಸಹಾಯದಲ್ಲಿ, ಸಹಭಾಗಿತ್ವದಲ್ಲಿ ಬೆಳೆಯುವ ಸಂಸ್ಥೆಯಾಗಿರುತ್ತದೆ. ಹೀಗಾಗಿ ಈ ದಾಖಲೀಕರಣ ಯೋಜನೆಯನ್ನು ಮುಂದಿನ ಹಂತಕ್ಕೆ ಒಯ್ಯಲು, ನಿಮ್ಮ ಸಹಾಯ ಅಗತ್ಯವಾಗಿದೆ. ಮೊದಲಿಗೆ, ದಾಖಲೀಕರಿಸಿದ ನಾಟಕಗಳ ಇಂಗ್ಲೀಷ್ ಉಪಶೀರ್ಷಿಕೆಯನ್ನು ಇತರ ಭಾಷೆಗಳಿಗೆ ಭಾಷಾಂತರಿಸಲು ನಿಮ್ಮ ಸಹಾಯ ಬೇಕಿದೆ. ನಿಮಗೆ ಇದರಲ್ಲಿ ಆಸಕ್ತಿ ಇದ್ದಲ್ಲಿ, ನಮ್ಮನ್ನು ಸಂಪರ್ಕಿಸಿರಿ.
ದಾಖಲೀಕರಣ ನಾಳಿನ ವಿಷಯವಾಗಿದೆ. ಈ ದಾಖಲೀಕರಣಗಳು ಭವಿಷ್ಯದ ಪ್ರಯೋಗಗಳಿಗೆ ಆಕರವಾಗಲಿವೆ.
ಕೆ.ವಿ. ಅಕ್ಷರ

ನೀನಾಸಮ್

ನೀನಾಸಮ್ ದಾಖಲೀಕರಣದ ವಿವಿಧ ಅಧ್ಯಾಯಗಳು

(ಈ ಕೆಳಗಿನ ಕೊಂಡಿಗಳನ್ನು ಕ್ಲಿಕ್ಕಿಸಿದರೆ, ಅವು ಯೂ-ಟ್ಯೂಬಿನಲ್ಲಿ ಸಂಬಂಧಿಸಿದ ವೀಡಿಯೋ ಭಾಗಕ್ಕೆ ಕರೆದೊಯ್ಯುತ್ತದೆ.)

ಹೆಗ್ಗೋಡಿನ ನೀನಾಸಮ್ ಬಳಗಕ್ಕೆ ಆಭಾರಿಯಾಗಿದ್ದೇವೆ.

ಯೋಜನೆ ಕಾರ್ಯರೂಪಕ್ಕೆ ಬರಲು ಪ್ರತ್ಯಕ್ಷ-ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.

ದಾಖಲೀಕರಣಕ್ಕೆ ಧನ ಸಹಾಯ ನೀಡಿದವರು

ಅಶೋಕ ವರ್ಧನ | ಇಲಾ ಎಸ್. ಭಟ್ | ಶೈಲಜಾ ಎಸ್. ಭಟ್ | ಎಂ. ಟಿ. ಹೆಬ್ಬಾರ್ | ಎಚ್. ಸುಂದರ ರಾವ್ | ಡಾ. ಕೃಷ್ಣ ಮೋಹನ್ ಪ್ರಭು | ಡಾ. ನಿಸರ್ಗ | ಪ್ರಸನ್ನ ಕೆ.ಆರ್ | ವಚನ್ ಶೆಟ್ಟಿ

ಸಂಚಿ ಫೌಂಡೇಷನ್ ದಾಖಲೀಕರಣ ತಂಡ

ಛಾಯಾಗ್ರಹಣ – ವಿಷ್ಣುಪ್ರಸಾದ್, ಲಕ್ಷ್ಮಣ್ ನಾಯಕ್, ಸೋಮನಾಥ | ಛಾಯಾಗ್ರಹಣ ಸಹಾಯ – ಅವಿನಾಶ್ | ಧ್ವನಿ ಗ್ರಹಣ ಹಾಗೂ ಸಂಸ್ಕರಣ – ಜೇಮಿ ಡಿಸಿಲ್ವ | ಪೂರಕ ಧ್ವನಿ ಗ್ರಹಣ – ಶಿಶಿರ ಕೆ.ವಿ | ನಾಟಕಗಳ ಸಂಕಲನ – ಪ್ರಶಾಂತ್ ಪಂಡಿತ್ | ಸಂದರ್ಶನಗಳು – ಎನ್..ಎಂ ಇಸ್ಮಾಯಿಲ್ | ಸಂದರ್ಶನ ಸಂಕಲನ – ಅಭಯ ಸಿಂಹ | ಅಂತರ್ಜಾಲ ನಿರ್ವಹಣೆ – ಓಂಶಿವಪ್ರಕಾಶ್ | ಉಪಶೀರ್ಷಿಕೆಗಳು – ಅವಿನಾಶ್ ಜಿ. | ಛಾಯಾಗ್ರಹಣ – ಪವಿತ್ರಾ, ಓಂಶಿವಪ್ರಕಾಶ್ | ದಾಖಲೀಕರಣ ನಿರ್ದೇಶನಅಭಯ ಸಿಂಹ

ನೀನಾಸಮ್ ತಿರುಗಾಟ 2015 – ಪಿ. ಲಂಕೇಶ್ ಅವರ ನಾಟಕ ‘ಗುಣಮುಖ’

ಸಂಗೀತ ವಿನ್ಯಾಸ – ಅಕ್ಷರ ಕೆ.ವಿ. | ವಿನ್ಯಾಸ, ನಿರ್ದೇಶನ – ಮಂಜು ಕೊಡಗು । ಗುಣಮುಖ ಪಾತ್ರವರ್ಗ – ಅವಿನಾಶ್ ರೈ ಎಮ್.ಕೆ. (ನಾದಿರ್ ಷಾ) | ಚಂದನ್ ಎಮ್. (ನಜೀರುದ್ದಿನ್ ಷಾ, ಶಂಶುದ್ದೀನ್ ಖಾನ್, ಸಹಾಯಕ, ಮೇಳ) | ದಯಾನಂದ್ ಪಲ್ಲವಗೆರೆ (ನಿಜಾಮ್ಉಲ್ಮುಲ್ಕ್, ನರ್ತಕ) | ನಾಗರಾಜ ಶಿರಸಿ (ನಜೀರ್, ಮೇಳ, ಅಪ್ಫಜಲ್, ಶಂಶುದ್ದೀನ್ ಖಾನ್, ಪ್ರಾರ್ಥನೆಯ ಗುಂಪು) | ಬಿಂದು ರಕ್ಷಿದಿ (ಅಲಾವಿಖಾನ್, ಮೇಳ) | ಮನೋಜ್ ಸುಖ್‍ದೇವ್ (ತನ್ವೀರ್, ಹಾಡುಗಾರ, ಪ್ರಾರ್ಥನೆಯ ಗುಂಪು) | ಮೋಹನ್ ಶೇಣಿ (ರಜ್ವಿ) | ಶರತ್ ಎಸ್. (ಸಾದತ್ ಖಾನ್, ನರ್ತಕ, ಹಮೀದ್ ಪ್ರಾರ್ಥನೆಯ ಗುಂಪು, ಮಮ್ತಾಜ್, ಮೇಳ) | ಶ್ರುತಿ ವಿ. ತಿಪಟೂರು (ಇಕ್ಬಾಲ್, ಪರ್ಷಿಯನ್ ದೂತ, ಮೇಳ, ಪಾಷಾ, ಫರೂಕ್, ಪ್ರಾರ್ಥನೆಯ ಗುಂಪು)

ನೀನಾಸಮ್ ತಿರುಗಾಟ 2015 – ಮೋಲಿಯೇರ್ ನಾಟಕ ‘ತಾರ್ತೂಫ್’

ಅನುವಾದ – ಎ.ಎನ್. ಮೂರ್ತಿರಾವ್ | ವಸ್ತ್ರವಿನ್ಯಾಸ, ಸಂಗೀತ ವಿನ್ಯಾಸ – ಜಗದೀಶ | ವಿನ್ಯಾಸ, ನಿರ್ದೇಶನ – ಎಂ. ಗಣೇಶ್ । ತಾರ್ತೂಫ್ ಪಾತ್ರವರ್ಗ – ಅವಿನಾಶ್ ರೈ ಎಮ್.ಕೆ. (ವಲೇರ್) | ಚಂದನ್ ಎಮ್. (ಕ್ಲೆಯಾಂತ್) | ದಯಾನಂದ್ ಪಲ್ಲವಗೆರೆ (ದಾಮಿ, ಪೋಲೀಸ್ ಅಧಿಕಾರಿ, ಪ್ಲಿಪೆಂತ್) | ನಾಗರಾಜ ಶಿರಸಿ (ತಾರ್ತೂಫ್) | ಬಿಂದು ರಕ್ಷಿದಿ (ಎಲ್ಮೀರ) | ಮನೋಜ್ ಸುಖ್‍ದೇವ್ (ದಾಮಿ,ಪೋಲೀಸ್ ಅಧಿಕಾರಿ, ಪ್ಲಿಪೆಂತ್) | ಮೋಹನ್ ಶೇಣಿ (ಅರ್ಗಾನ್) | ಮಂಜು ಸಿರಿಗೇರಿ (ಲಾಯಲ್) | ಶರತ್ ಎಸ್. (ಮದಾಮ್ ಪರ್ನೆಲ್) | ಶಿಲ್ಪಾ ಎಸ್. (ಮರಿಯಾನ) | ಶ್ರುತಿ ವಿ. ತಿಪಟೂರು (ದೊರೀನ) | ಹನಮಪ್ಪ ಚಂದಪ್ಪ ಚಲವಾದಿ (ಲಾರೆಂಟ್)

ಬೆಳಕುಅವಿನಾಶ್ ರೈ ಎಮ್.ಕೆ., ದಯಾನಂದ್ ಪಲ್ಲವಗೆರೆ, ನಾಗರಾಜ ಸಿರಸಿ | ಬೆಳಕಿನ ನಿರ್ವಹಣೆ – ಮಂಜು ಸಿರಿಗೇರಿ | ರಂಗಸಜ್ಜಿಕೆ – ಮೋಹನ್ ಶೇಣಿ, ಮನೋಜ್ ಸುಖ್‍ದೇವ್, ಶರತ್ ಎಸ್., ಶುಭಕರ | ವೇಷಭೂಷಣ – ಶ್ರುತಿ ವಿ., ಚಂದನ್ ಎಮ್. | ಪ್ರಸಾಧನ – ಶಿಲ್ಪಾ ಎಸ್. | ಪರಿಕರ – ಬಿಂದು ರಕ್ಷಿದಿ | ಸಂಗೀತ/ಧ್ವನಿ – ರವಿಕುಮಾರ ಬಿ. | ರಂಗ ನಿರ್ವಹಣೆ – ಅವಿನಾಶ್ ರೈ ಎಮ್.ಕೆ. | ರಂಗ ಚಲನೆ – ಸೂರಜ್ ಬಿ.ಆರ್. | ನೃತ್ಯವಿನ್ಯಾಸ – ವಿನೀತ್ ಕುಮಾರ್ | ವಸ್ತ್ರವಿನ್ಯಾಸ – ವಿದ್ಯಾ ಹೆಗಡೆ | ಬೆಳಕಿನ ವಿನ್ಯಾಸ – ಕೃಷ್ಣಮೂರ್ತಿ ಎಮ್.ಎಮ್. | ಸಂಚಾರ ವ್ಯವಸ್ಥಾಪಕ – ಹನಮಪ್ಪ ಚಂದಪ್ಪ ಚಲವಾದಿ | ಕಛೇರಿ ನಿರ್ವಹಣೆಶ್ರೀಕಾಂತ ಜಿ. ಆರ್. | ಯೋಜನೆ ಮತ್ತು ನಿರ್ವಹಣೆ – ಶ್ರೀಪಾದ ಟಿ. ಭಾಗವತ್

ನೀನಾಸಮ್ ನಾಟಕ 2015 – ಒರೆಸ್ತಿಸ್ ಪುರಾಣ

ಏಸ್ಕೆ ೈಲಸ್‍ನ ಒರೆಸ್ಟಿಯಾ ನಾಟಕ ತ್ರಿವಳಿಯನ್ನು ಆಧರಿಸಿದ, ಡಾ| ವಿಜಯಾ ಗುತ್ತಲ ಅವರ ಕನ್ನಡ ಅನುವಾದ | ನಿರ್ದೇಶನ – ಬಿ.ಆರ್. ವೆಂಕಟರಮಣ ಐತಾಳ | ಪಾತ್ರವರ್ಗ (ಅಗಮೆಮ್ನೋನ್) ಸುಬ್ಬಣ್ಣ ನಂದ್ರೆ, (ಕ್ಲಿತೆಮ್ನಿಸ್ತ್ರ) ವಿದ್ಯಾ ಹೆಗಡೆ, ಸುಶೀಲಾ ಹೆಗಡೆ | (ಏಗಿಸ್ತೋಸ್) ನಾಗರಾಜ ಎಂ.ಎಸ್. | (ಕಸಾಂದ್ರಾ) ಸೌರಭ ಕೆ., ಸುಹಾನಾ ಎಂ. | (ಒರೆಸ್ತಿಸ್) ಚನ್ನಕೇಶವ ಎಸ್. ಎಚ್., ಚೈತ್ರಕುಮಾರ್ ಮಾವಿನಕುಳಿ | (ಎಲೆಕ್ಟ್ರಾ) ಅರ್ಪಿತಾ ಬಿ., ವಿಭಾ ಐತಾಳ | (ಅಪೆÇೀಲೊ) ಕಿರಣ ಎಸ್. ಪುರಪ್ಪೆಮನೆ | (ಅಥೀನಾ) ಮಧುನಿಶಾ | (ಹರ್ಮಿಸ್) ಶಂಕರ ಭಟ್ | (ದೂತ) ರಮೇಶ ಎನ್.ಎಂ. ನಂದ್ರೆ, ನವೀನ್ ಮಳವಳ್ಳಿ | (ಕಾವಲುಗಾರರು) ಜಯಪ್ರಕಾಶ್ ಶೆಟ್ಟಿ ಹೆಬ್ಬೆ ೈಲು, ರಾಘವೇಂದ್ರ ಎನ್. ಕಲ್ಕೊಪ್ಪ, ನವೀನ್ ಮಳವಳ್ಳಿ | (ಪಿಲಾದಿಸ್) ನವೀನ್ ಮಳವಳ್ಳಿ | (ಸೇವಕ) ಗಣೇಶ ಎಚ್.ಬಿ. | (ಬಾಲಕ ಒರೆಸ್ತಿಸ್) ಸಮರ್ಥ ಪಿ.ಎನ್. | (ಮೇಳ) ಶಂಕರ ಭಟ್, ರಮೇಶ ಎನ್.ಎಂ. ನಂದ್ರೆ, ಜಯಪ್ರಕಾಶ್ ಶೆಟ್ಟಿ ಹೆಬ್ಬೈಲು, ನವೀನ್ ಮಳವಳ್ಳಿ, ಕಿರಣ ಎಸ್. ಪುರಪ್ಪೆಮನೆ, ಚೈತ್ರಕುಮಾರ್ ಮಾವಿನಕುಳಿ, ಸಂಪದ ಎಸ್. ಭಾಗವತ, ದರ್ಶನ್ ಎಚ್.ಎಸ್., ರಾಘವೇಂದ್ರ ಎನ್. ಕಲ್ಕೊಪ್ಪ, ಶ್ರೀಧನ ಬಿ.ಎನ್. | (ಉಗ್ರದೇವತೆಗಳು) ವಿದ್ಯಾ ಹೆಗಡೆ, ದರ್ಶನ್ ಎಚ್.ಎಸ್., ಸಂಪದ ಎಸ್. ಭಾಗವತ, ಸೌರಭ ಕೆ., ಅರ್ಪಿತಾ ಬಿ., ಸುಹಾನಾ ಎಂ., ವಿಭಾ ಐತಾಳ, ಮಯೂರ ಹೆಗಡೆ, ಸಮರ್ಥ ಪಿ.ಎನ್. | (ಹಿರಿಯ ನಾಗರಿಕರು) ನರಹರಿ ಎಂ.ವಿ., ಸಿದ್ದವೀರಪ್ಪ ಎಂ.ಜಿ., ನಾರಾಯಣ ಸ್ವಾಮಿ ಪಿ.ಕೆ., ಸುಬ್ಬಣ್ಣ ನಂದ್ರೆ, ರಮೇಶ ಎನ್.ಎಂ. ನಂದ್ರೆ, ನಾಗರಾಜ ಎಂ.ಎಸ್., ಶಂಕರ ಭಟ್, ಶ್ರೀಧನ ಬಿ.ಎನ್., ರಂಗನಿರ್ವಹಣೆ, ಎಂ.ಎಸ್. ನಾಗರಾಜ

ರಂಗಸಜ್ಜಿಕೆ – ಜಯಪ್ರಕಾಶ್ ಶೆಟ್ಟಿ ಹೆಬ್ಬೈಲು, ಸುಬ್ಬಣ್ಣ ನಂದ್ರೆ, ಕಿರಣ ಎಸ್. ಪುರಪ್ಪೆಮನೆ, ಚನ್ನಕೇಶವ ಎಸ್. ಎಚ್., ಶ್ರೀಧನ ಬಿ.ಎನ್. | ವಸ್ತ್ರ – ವಿದ್ಯಾ ಹೆಗಡೆ, ಸುಶೀಲಾ ಹೆಗಡೆ, ಅರ್ಪಿತ ಬಿ., ವಿಭಾ ಐತಾಳ | ಬೆಳಕು – ನವೀನ್ ಮಳವಳ್ಳಿ, ರಾಘವೇಂದ್ರ ಎನ್. ಕಲ್ಕೊಪ್ಪ, ಚನ್ನಕೇಶವ ಎಸ್.ಎಚ್., ಸಂಪದ ಎಸ್. ಭಾಗವತ್, ಗಣೇಶ ಎಚ್.ಬಿ., ದರ್ಶನ್ ಎಚ್.ಎಸ್., ನಾರಾಯಣ ಸ್ವಾಮಿ ಪಿ.ಕೆ. | ಪರಿಕರ – ಚೈತ್ರಕುಮಾರ್ ಮಾವಿನಕುಳಿ, ಶಂಕರ ಭಟ್, ಸುಹಾನಾ ಎಂ., ರಮೇಶ ಎನ್.ಎಂ. ನಂದ್ರೆ, ಸೌರಭ ಕೆ. | ಸಂಗೀತ – ಎಂ. ಪಿ. ಹೆಗಡೆ, ಭಾರ್ಗವ ಕೆ. ಎನ್. | ಪ್ರಚಾರ – ಸಿದ್ದವೀರಪ್ಪ ಎಂ. ಜಿ., ಶ್ರೀಧನ್ ಬಿ. ಎನ್., ನರಹರಿ ಎಂ.ವಿ. | ರಂಗ ವಿನ್ಯಾಸ – ಮಂಜು ಕೊಡಗು | ಬೆಳಕಿನ ವಿನ್ಯಾಸ ಮತ್ತು ನಿರ್ವಹಣೆ – ಎಂ. ಎಂ. ಕೃಷ್ಣಮೂರ್ತಿ | ಸಹಾಯ – ಅವಿನಾಶ್ ರೈ | ನೃತ್ಯ ವಿನ್ಯಾಸ – ಸೂರಜ್ ಬಿ.ಆರ್. | ತಾಂತ್ರಿಕ ನೆರವು – ಹರೀಶ ಛಲವಾದಿ, ಪ್ರವೀಣ್ ಸುಳ್ಯ, ರಮೇಶ ಪಿ.ಕೆ., ಫಣಿಯಮ್ಮ ಎಚ್. ಎಸ್.

ಸಂಚಿ ಫೌಂಡೇಶನ್

ಸಂಚಿ ಫೌಂಡೇಶನ್ (ನೋ) ನೀನಾಸಮ್ ಬಳಗದೊಂದಿಗೆ ಈ ಯೋಜನೆಗೆ ಕೈ-ಜೋಡಿಸಿದೆ. ಸಂಚಿ ಫೌಂಡೇಶನ್ ಲಾಭರಹಿತ ಸಂಸ್ಥೆಯಾಗಿದ್ದು, ದೃಶ್ಯ-ಶ್ರಾವ್ಯ ಪರಂಪರೆಯ ದಾಖಲೀಕರಣದ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಂಚಿ ಫೌಂಡೇಶನ್ನಿಗೆ ಈ ಕ್ಷೇತ್ರದಲ್ಲಿ ಅಪಾರ ಅನುಭವ ಇರುವುದಲ್ಲದೇ, ತಜ್ಞರ ಬೆಂಬಲವೂ ಇದೆ.

ಈ ಯೋಜನೆಗೆ ಧನ ಸಹಾಯ ನೀಡಿ ಬೆಂಬಲಿಸಿ

ಈ ಯೋಜನೆಗೆ ಅಗತ್ಯ ಹಣವನ್ನು ಸಮುದಾಯದ ಬೆಂಬಲದಿಂದಲೇ ಸಂಗ್ರಹಿಸುವ ಆಶಯ ಸಂಚಿ ಫೌಂಡೇಶನ್ನಿಗೆ ಇದೆ. ಎಲ್ಲಾ ದಾನಿಗಳಿಗೂ ಸಂಚಿ ಫೌಂಡೇಶನ್ನಿನ ಕಡೆಯಿಂದ ರಶೀದಿ ದೊರೆಯುತ್ತದೆ. ಸಂಚಿಗೆ ನೀಡಿದ ದೇಣಿಗೆಗಳು ಆದಾಯ ತೆರಿಗೆಯಲ್ಲಿ ೮೦ಜಿ ವಿನಾಯಿತಿಯನ್ನೂ ಪಡೆಯುತ್ತವೆ. ಸಂಚಿಯ ಈ ಕೆಲಸವನ್ನು ಮುಂದುವರೆಸಿಕೊಂಡು ಹೋಗಲು ಸಹಾಯ ಮಾಡಿ, ನಮ್ಮನ್ನು ಬೆಂಬಲಿಸಿ. ನಿಮಗೆ ಸಾಧ್ಯವಾದಷ್ಟು ದೇಣಿಗೆಯನ್ನು ದಯವಿಟ್ಟು ನೀಡಿ.