ನಿಮ್ಮ ಬೆಂಬಲ ಬೇಕಿದೆ

ಸಂಚಿ ಫೌಂಡೇಶನ್ ಲಾಭರಹಿತ ಸಂಸ್ಥೆಯಾಗಿದ್ದು ದೃಶ್ಯ-ಶ್ರಾವ್ಯ ದಾಖಲೀಕರಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ. ಸಂಚಿ ಫೌಂಡೇಶನ್ನಿನ ಕೆಲಸಗಳು ಸಮುದಾಯದ ಭಾಗವಹಿಸುವಿಕೆಯಿಂದ ಸಾಧ್ಯವಾಗುತ್ತದೆ. ಇದರ ಮೂಲಕ ಸೃಷ್ಟಿಯಾಗುವ ಸೃಜನಾತ್ಮಕ ಕೃತಿಗಳು, ಜ್ಞಾನ ಸಂಗ್ರಹಣೆ ಸಾರ್ವಜನಿಕರ ಮುಕ್ತ ಬಳಕೆಗಾಗಿ ಅಂತರ್ಜಾಲದಲ್ಲಿ ಇಡಲಾಗುತ್ತದೆ. ಈ ಕೆಲಸದ ಮೂಲಕ ನಾವು ಸಾಧ್ಯವಾದಷ್ಟು ಜನರಿಗೆ ಈ ಜ್ಞಾನ ಭಂಡಾರವನ್ನು ತಲುಪಿಸುವ ಆಶಯವನ್ನು ಹೊಂದಿದ್ದೇವೆ. ಆದರೆ ಅತಿ ಹೆಚ್ಚು ಜನರನ್ನು ತಲುಪಲು ನಿಮ್ಮ ಭಾಗವಹಿಸುವಿಕೆಯಿಂದ ಮಾತ್ರ ಸಾಧ್ಯ. ಇದು ಸಮುದಾಯದ ಕೆಲಸ. ಬನ್ನಿ ಕೈ-ಜೋಡಿಸಿ. ನೀವು ನಮ್ಮೊಂದಿಗೆ ಹೇಗೆ ಭಾಗವಹಿಸಬಹುದು ಎನ್ನುವುದಕ್ಕೆ ಕೆಲವು ವಿವರಗಳು ಇಲ್ಲಿವೆ.

 

ಭಾಗವಹಿಸಿ । ದೇಣಿಗೆ ನೀಡಿ । ಪರಿಧಿಯಿಂದಾಚೆಗೆ ಜಿಗಿಯೋಣ ಬನ್ನಿ 

ನಮ್ಮ ಬಗ್ಗೆ ಮಾತನಾಡಿ

ಸಂಚಿ ಫೌಂಡೇಶನ್ನಿನ ಕೆಲಸಗಳು ಸಾರ್ವಜನಿಕವಾಗಿ ಅಂತರ್ಜಾಲದಲ್ಲಿ ಲಭ್ಯವಿದೆ. ನಾವು ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಇದ್ದೇವೆ. ನಮ್ಮಿಂದ ಸಾಧ್ಯವಾದಷ್ಟು ಜನರನ್ನು ತಲುಪುವ ಪ್ರಯತ್ನದಲ್ಲಿ ನಾವು ಸದಾ ತೊಡಗಿರುತ್ತೇವೆ. ಆದರೆ ಇದು ನಿಜವಾಗಿಯೂ ಯಶಸ್ವಿಯಾಗ ಬೇಕಿದ್ದರೆ, ನೀವು ನಮ್ಮ ಕುರಿತಾಗಿ ಮಾತನಾಡಬೇಕು. ಹೀಗಾಗಿ ನಮ್ಮ ಪ್ರಕಟಣೆಗಳನ್ನು, ಜಾಲತಾಣವನ್ನು, ನೀವಿರುವ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ, ನಮ್ಮ ಬಗ್ಗೆ ಪ್ರಚಾರ ನೀಡುವುದರ ಮೂಲಕ ನಮ್ಮನ್ನು ಬೆಂಬಲಿಸಿ. ನಿಮ್ಮೆಲ್ಲಾ ಬಂಧು-ಬಳಗ, ಗೆಳೆಯ-ಗೆಳತಿಯರಿಗೆ ನಮ್ಮ ಬಗ್ಗೆ ತಿಳಿಸಿ. ಆ ಮೂಲಕ ಸಮುದಾಯವಾಗಿ ನಾವೆಲ್ಲಾ ಜೊತೆಯಾಗಿ ಬೆಳೆಯೋಣ.

ಲೈಕ್ ಮಾಡಿ – ಶೇರ್ ಮಾಡಿ – ಸಬ್ ಸ್ಕ್ರೈಬ್ ಮಾಡಿ!

ಭಾಷಾಂತರಿಸಿ

ನಮಗೆ ಉಪಶೀರ್ಷಿಕೆಗಳನ್ನು ಸಿದ್ಧಪಡಿಸಲು ನೆರವಾಗಿ. ನಮ್ಮ ಹೆಚ್ಚಿನ ಕೃತಿಗಳು ಕನ್ನಡದಲ್ಲಿವೆ. ಕನ್ನಡದ ಜ್ಞಾನವನ್ನು ಕನ್ನಡೇತರರಿಗೆ ತಲುಪಿಸಲು, ನಾವಿ ಉಪಶೀರ್ಷಿಕೆಗಳನ್ನು ರೂಪಿಸಬೇಕಾಗುತ್ತದೆ. ನಿಮಗೆ ಫ್ರೆಂಚ್ ಬರುತ್ತೆಯೇ? ಜರ್ಮನ್ ಭಾಷೆ? ಅದ್ಭುತ! ಬಹಳ ಸಂತೋಷ. ನಮಗೆ ಆ ಭಾಷೆಗಳಲ್ಲಿ ಉಪಶೀರ್ಷಿಕೆಗಳನ್ನು ರೂಪಿಸಲು ಸಹಕರಿಸಿ. ಕನ್ನಡದ ಜ್ಞಾನ ನಿಧಿಯನ್ನು ವಿಶ್ವ ಸಮುದಾಯಕ್ಕೆ ಪರಿಚಯಿಸೋಣ. ಇದು ಕನ್ನಡ ಸಮುದಾಯ ವಿಶ್ವದಲ್ಲಿರುವ ಸಮಾನ ಮನಸ್ಕರ ಸಮುದಾಯಕ್ಕಾಗಿ ಮಾಡುವ ಕೆಲಸ.

ಹೇಗೆ ಭಾಗವಹಿಸುವುದು ಎಂದು ನೋಡಲು ಮೇಲಿನ ವೀಡಿಯೋ ನೋಡಿ. 

ನಿಮ್ಮಲ್ಲಿನ ಜ್ಞಾನವನ್ನು ಹಂಚಿ

ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಮಹತ್ವದ ದೃಶ್ಯ / ಶ್ರಾವ್ಯ / ಚಿತ್ರ ಏನಾದರೂ ಇವೆಯೇ? ಅದರ ಮೇಲೆ ಹಕ್ಕು ನಿಮಗಿದೆಯೇ? ಅದನ್ನು ವಿಶ್ವ ಸಮುದಾಯಕ್ಕೆ ಹಂಚುವ ಮನಸ್ಸು ನಿಮಗಿದೆಯೇ? ಅದನ್ನು ನೀವು ನಮಗೆ ಒದಗಿಸಿ, ನಾವು ಅದನ್ನು ಪ್ರಕಟಿಸುತ್ತೇವೆ. ಆಸಕ್ತರಿಗೆ ಎಲ್ಲಾ ಮಾಹಿತಿಗಳು ಒಂದೆಡೆ ಲಭ್ಯವಾಗುವಂತೆ ಮಾಡುವ ಪ್ರಯತ್ನ ನಾವು ಮಾಡುತ್ತೇವೆ. ಸಂಚಿ ಫೌಂಡೇಶನ್ ಈ ಕೃತಿಗಳ ಬಳಕೆಯ ಸಂದರ್ಭದಲ್ಲಿ ನಿಮ್ಮ ಹೆಸರನ್ನು ಸೂಕ್ತವಾಗಿ ಉಲ್ಲೇಖಿಸುತ್ತದೆ. ಇದರ ಹಕ್ಕುಗಳು ಸಂಚಿಗೂ ಸೀಮಿತವಾಗಿರುವುದಿಲ್ಲ.

ಕ್ರಿಯೇಟಿವ್ ಕಾಮನ್ಸ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೇಲಿನ ವೀಡಿಯೋ ನೋಡಿ. 

ದೇಣಿಗೆ ನೀಡಿ

ಸಮುದಾಯದ ಶ್ರಮದ ಹೊರತಾಗಿಯೂ, ಅನೇಕ ಸಂದರ್ಭಗಳಲ್ಲಿ, ನಾವು ಗುಣಮಟ್ಟಕ್ಕಾಗಿ ವೃತ್ತಿಪರರನ್ನು ಅವಲಂಬಿಸಬೇಕಾಗುತ್ತದೆ. ಉಪಕರಣಗಳ ಬಾಡಿಗೆ, ಅಂತರ್ಜಾಲ ನಿರ್ವಹಣಾ ವೆಚ್ಚ, ಪತ್ರವ್ಯವಹಾರಗಳ, ಪ್ರಯಾಣದ ವೆಚ್ಚ ಇತ್ಯಾದಿಗಳು, ನಮ್ಮಂಥಾ ಲಾಭರಹಿತ ಸಂಸ್ಥೆಗಳಿಗೆ ಅನೇಕ ಬಾರಿ ಸವಾಲಾಗಿ ಬಿಡುತ್ತದೆ. ನಿಮ್ಮಂಥಾ ಸಹೃದಯಿಗಳ ಉದಾರ ದೇಣಿಗೆ ಇಂಥಾ ಸಂದರ್ಭಗಳಲ್ಲಿ ವಿಶೇಷ ಸಹಕಾರಿಯಾಗಿರುತ್ತದೆ.

 

ಹೀಗಾಗಿ ನೀವು ನಮಗೆ ದೇಣಿಗೆ ನೀಡುವುದರ ಮೂಲಕ ನಮ್ಮ ಚಟುವಟಿಕೆಗಳನ್ನು ಬೆಂಬಲಿಸಬಹುದು.