ನಮ್ಮ ತಂಡದ ಪರಿಚಯ
Meet Our Team @ Sanchiಅಭಯ ಸಿಂಹ
ಫಿಲ್ಮ್ ಹಾಗೂ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಸಿನೆಮಾ ನಿರ್ದೇಶನದ ತರಬೇತಿ ಹೊಂದಿರುವ ನಿರ್ದೇಶಕ. ಕನ್ನಡ ಹಾಗೂ ಮಲಯಾಳದಲ್ಲಿ ಸಿನೆಮಾ ನಿರ್ದೇಶಿಸಿದ್ದಾರೆ. ಮೊದಲ ಚಲನ ಚಿತ್ರ `ಗುಬ್ಬಚ್ಚಿಗಳು’ ರಾಷ್ಟ್ರಪ್ರಶಸ್ತಿಯನ್ನೂ ಪಡೆದಿದೆ. ೨೦ಕ್ಕೂ ಹೆಚ್ಚಿನ ಸಾಕ್ಷ್ಯಚಿತ್ರಗಳಾನ್ನೂ, ಮ್ಯೂಸಿಕ್ ವೀಡಿಯೋಗಳನ್ನೂ ನಿರ್ದೇಶಿಸಿರುವ ಅನುಭವ ಅಭಯ ಸಿಂಹ ಅವರದ್ದು. ಫಿಲ್ಮ್ ಫೇರ್ ಪ್ರಶಸ್ತಿಗೆ ನಿರ್ಣಾಯಕ ತಂಡದಲ್ಲಿ ಇದ್ದವರು. ಬರ್ಲಿನ್ ಚಿತ್ರೋತ್ಸವಕ್ಕೆ ಭಾರತವನ್ನು ೨೦೦೯ರಲ್ಲಿ ಪ್ರತಿನಿಧಿಸಿದ್ದೂ ಸೇರಿದಂತೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಚಲನ ಚಿತ್ರ ಕ್ಷೇತ್ರದಲ್ಲಿ ಅನುಭವ ಹೊಂದಿದವರು. ಚಲನ ಚಿತ್ರ ಮಾಧ್ಯಮದ ಶಿಕ್ಷಣದಲ್ಲೂ ಇವರಿಗೆ ಸಾಕಷ್ಟು ಪರಿಶ್ರಮವಿದೆ.
ಎನ್.ಎ.ಎಂ ಇಸ್ಮಾಯಿಲ್
ಕರ್ನಾಟಕದ ಪ್ರಮುಖ ವಾರ್ತಾಪತ್ರಿಕೆಯಾಗಿರುವ ಪ್ರಜಾವಾಣಿ ಪತ್ರಿಕೆಯಲ್ಲಿ ಇವರು ಮುಖ್ಯ ಉಪಸಂಪಾದಕರಾಗಿದ್ದಾರೆ. ಇಸ್ಮಾಯಿಲ್ ಪ್ರಜಾವಾಣಿಯಲ್ಲಿ ತಂತ್ರಜ್ಞಾನ ಹಾಗೂ ಬಹುಮಾಧ್ಯಮ ವಿಭಾಗದ ಮುಖ್ಯಸ್ಥರೂ ಆಗಿದ್ದಾರೆ. ಇವರಿಗೆ ಛಾಯಾಗ್ರಹಣ ಹಾಗೂ ಸಿನೆಮಾ ಮಾಧ್ಯಮದಲ್ಲಿ ಅಪಾರ ಆಸಕ್ತಿ ಹಾಗೂ ಪರಿಶ್ರಮವಿದೆ. ಅವರ ಕಥೆ ಆಧಾರಿತವಾಗಿ ರೂಪಗೊಂಡ ಚಿತ್ರ, ಗುಬ್ಬಚ್ಚಿಗಳು ೨೦೦೮ರಲ್ಲಿ ರಾಷ್ಟ್ರಪ್ರಶಸ್ತಿಯ ಮನ್ನಣೆಯನ್ನೂ ಪಡೆದಿದೆ. ಇವರು ರಾಜ್ಯ ಚಲನಚಿತ್ರ ಪ್ರಶಸ್ತಿ ನಿರ್ಣಾಯಕರ ತಂಡದಲ್ಲಿ (2007) ಭಾಗವಹಿಸಿದ ಅನುಭವವನ್ನೂ ಹೊಂದಿದ್ದಾರೆ.
ಓಂಪ್ರಕಾಶ್ ಎಚ್.ಎಲ್
ಲಿನಕ್ಸಾಯಣ ಮೂಲಕ ಕನ್ನಡ ತಂತ್ರಾಂಶದ ಕುರಿತಾಗಿ ಅವಿರತವಾಗಿ ಬರೆಯುತ್ತಿರುವವರು. ಕನ್ನಡ ವಿಕಿಪೀಡಿಯಾ ಬರಹಗಾರರು ಹಾಗೂ FOSS evangelist. ಇವರು ಅಂತರ್ಜಾಲದಲ್ಲಿ ಕನ್ನಡ ತಂತ್ರಾಂಶ ಸಂಬಂಧೀ ಕೆಲಸಗಳಿಗೆ ಸಮುದಾಯಗಳನ್ನು ಕಟ್ಟುವ, ಬೆಳೆಸುವ ಕೆಲಸದಲ್ಲಿ ಬಹಳ ಕಾಲದಿಂದ ಪರಿಶ್ರಮ ಉಳ್ಳವರು. ಮುಕ್ತ ಹಾಗೂ ಉಚಿತ ಜ್ಞಾನ ಸಂಗ್ರಹದಲ್ಲಿ ಸಾಕಷ್ಟು ಕೆಲಸ ಮಾಡಿದ ಅನುಭವ ಇವರದ್ದು. ಇವರು ಸಂಚಯ ಹಾಗೂ ಕನ್ನಡ ಸಂಚಯದ ಸ್ಥಾಪಕ ಸದಸ್ಯರೂ ಆಗಿದ್ದಾರೆ. ತಂತ್ರಜ್ಞಾನ ಸಂಬಂಧೀ ಚಟುವಟಿಕೆಗಳ ಹೊರತಾಗಿ ಸಾಹಿತ್ಯ, ಛಾಯಾಗ್ರಹಣ, ಚಾರಣ ಇತ್ಯಾದಿಗಳಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ.
Moving with Time
Innovative Ideas
Adopting Technology
Open Communication
Recent Blog Posts
Learn from the top thought leaders in the industry.
ಭವಿಷ್ಯ ವಿಜ್ಞಾನ
ಕುದುರೆ ಮುಖದೆಡೆಗೆ
ಡೇವಿಡ್ ಕಾಪರ್ಫೀಲ್ಡ್‌ನ ಜೀವನ ವೃತ್ತಾಂತ ಮತ್ತು ಅನುಭವಗಳು
ಡೇವಿಡ್ ಕಾಪರ್ಫೀಲ್ಡ್‌ನ ಜೀವನ ವೃತ್ತಾಂತ ಮತ್ತು ಅನುಭವಗಳು (ಕಾದಂಬರಿ) ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್ ಕನ್ನಡ ಭಾವಾನುವಾದ ಎ.ಪಿ....
Recent Projects
Learn from the top thought leaders in the industry.