ದಾಖಲೀಕರಣದ ವಿವರಗಳು

ಯಕ್ಷಗಾನದ ಬಡಗುತಿಟ್ಟುಉತ್ತರದ ಶೈಲಿಯಲ್ಲಿ (ತೆಂಕುತಿಟ್ಟುದಕ್ಷಿಣದ ಶೈಲಿಗೆ ವ್ಯತಿರಿಕ್ತವಾಗಿ) ಪ್ರಾದೇಶಿಕವಾದ ಮತ್ತು ವ್ಯಕ್ತಿಗತವಾದ ಗುಣ ಲಕ್ಷಣಗಳು ಇವೆ. ಉಡುಪಿಕುಂದಾಪುರಗಳ ಸುತ್ತಮುತ್ತಲಿನ ಯಕ್ಷಗಾನವನ್ನು ಸಾಮಾನ್ಯವಾಗಿ ಬಡಗುತಿಟ್ಟು (ಉತ್ತರ) ಎಂತಲೂ, ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನವನ್ನು ಬಡಾಬಡಗು (ಉತ್ತರದ ಉತ್ತರ) ಎಂತಲೂ ಗುರುತಿಸುತ್ತಾರೆ.

ಕರ್ಕಿ ಯಕ್ಷಗಾನದ ಸಾಂಪ್ರದಾಯಿಕ ಶೈಲಿಯನ್ನು ಉತ್ತರ ಕನ್ನಡದ ಮೂಲ ರೂಪ ಮತ್ತು ಬಡಾಬಡಗು ತಿಟ್ಟಿನ ಅತಿ ಹಳೆಯ ಮತ್ತು ಪ್ರಾತಿನಿಧಿಕ ಶೈಲಿ ಎಂದು  ಸಂಶೋಧಕರು ಮತ್ತು ವಿದ್ವಾಂಸರು ಸ್ಪಷ್ಟವಾಗಿ ಗುರುತಿಸಿ ದಾಖಲಿಸಿದ್ದಾರೆ. ಕರ್ಕಿ ಪರಂಪರೆಗೆ ಮತ್ತು ಮೇಳಕ್ಕೆ ನಮಗೆ ತಿಳಿದಿರುವ 9 ತಲೆಮಾರುಗಳ (ಸುಮಾರು 200ಕ್ಕೂ ಹೆಚ್ಚು ವರ್ಷಗಳ) ದೀರ್ಘ ಕಾಲದ ಇತಿಹಾಸವಿದೆ. ಕಾಲಕ್ರಮದಲ್ಲಿ ಸ್ವಯಂ ಮಾಡಿದ ಬದಲಾವಣೆಗಳು ಮತ್ತು ಉಡುಪಿಕುಂದಾಪುರ ಬಡಗಿನ ಅಂಶಗಳ ಸೇರ್ಪಡೆಯ ಫಲವಾಗಿ ಬಡಾಬಡಗು ಶೈಲಿಯ ಮಾರ್ಪಾಡಾದ ಕೆಲವು ರೂಪಗಳು ಹೊರಹೊಮ್ಮಿದುವು. ಅವುಗಳು ಹಿಂದುಸ್ಥಾನಿ ಸಂಗೀತದ ಘರಣೆಗಳಂತೆ ಯಕ್ಷಗಾನದ ವೈಯಕ್ತಿಕ ಶೈಲಿಗಳೆಂದು ಗುರುತಿಸಲ್ಪಟ್ಟವು. ಜನರು ಅಂತಹ ಮಾರ್ಪಾಡಾದ ಬಡಾಬಡಗಿನ ರೂಪಗಳನ್ನು ಸಾಮಾನ್ಯವಾಗಿ ಅದನ್ನು ಹುಟ್ಟುಹಾಕಿದ ಸಾಧಕರ ಹೆಸರಿನಿಂದ ಗುರುತಿಸುತ್ತಾರೆ (ಉದಾಹರಣೆಗೆ ಶ್ರೀ ಕೆರೆಮನೆ ಶಿವರಾಮ ಹೆಗಡೆಯವರ ಶೈಲಿಯು ಕೆರೆಮನೆ ಶೈಲಿ). ಆದರೆ ಮೂಲ ಕರ್ಕಿ ಶೈಲಿಯು ಮುಂದುವರಿದು ಹಿರಿಯ ಪರಮಯ್ಯ ಹಾಸ್ಯಗಾರರ ಶೈಲಿ ಎಂದು ಗುರುತಿಸಲ್ಪಟ್ಟಿದೆ. ಇದನ್ನು ಸರಳವಾಗಿ ಹಾಸ್ಯಗಾರ ಶೈಲಿ ಅಥವಾ ಕರ್ಕಿ ಶೈಲಿ ಎಂತಲೂ (ಮನೆತನದ ಮತ್ತು ಊರಿನ ಹೆಸರಿನಿಂದ) ಕರೆಯುವುದುಂಟು.

ಪ್ರಸ್ತುತ ಹೊಸ ತಲೆಮಾರಿನಲ್ಲಿ ಕರ್ಕಿ ಶೈಲಿಯನ್ನು ಅನುಸರಿಸುವರಿಲ್ಲ ಮತ್ತು ಹೀಗಾಗಿ ಅದು ಕ್ಷೀಣಿಸುತ್ತಿದೆ. ನಾವು ಸದ್ಯ ನಮ್ಮೊಂದಿಗಿರುವ ಈ ಶೈಲಿಯ ಮೂವರು ಮುಖ್ಯ ಕಲಾವಿದರನ್ನು ಕಂಡೆವುಕೃಷ್ಣ ಹಾಸ್ಯಗಾರ, ನಾರಾಯಣ ಹಾಸ್ಯಗಾರ ಮತ್ತು ಸತ್ಯ ಹಾಸ್ಯಗಾರ. ಆಗಲೇ ಇವರೆಲ್ಲ ಎಪ್ಪತ್ತು ವರ್ಷಗಳಿಗೂ ಮೀರಿದ ವಯೋಮಾನದವರಾಗಿದ್ದರು.

ನಾವು ಕಂಡಂತೆ ಹಿರಿಯಡಕದ ಗೋಪಾಲ ರಾವ್, ಬನ್ನಂಜೆ ಸಂಜೀವ ಸುವರ್ಣ, ರಾಘವ ನಂಬಿಯಾರರಂಥ ಯಕ್ಷಗಾನದ ಅನುಭವಿಗಳು ಮತ್ತು ಪರಿಣಿತರು ಕರ್ಕಿ ಶೈಲಿಯನ್ನು ಮೆಚ್ಚಿ ಪೂರ್ತಿ ಪ್ರಮಾಣದ ಮಾನ್ಯತೆಯಿಂದ ಅನುಮೋದಿಸುತ್ತಾರೆ. ಕಲಾವಿದರ ವಯೋಮಾನದ ಸಂಬಂಧವಾದ ಅಸಮರ್ಥತೆಯ ಕಾರಣದಿಂದ ಪೂರ್ಣ ಪ್ರಮಾಣದ ಪ್ರಸಂಗಗಳ ಪ್ರದರ್ಶನ ಸಾಧ್ಯವಾಗಲಿಲ್ಲ. ಆದ್ದರಿಂದ ಅವರಿಂದ ಶಕ್ಯವಾದ ದೃಶ್ಯಗಳ ಮತ್ತು ಪರಂಪರಾಕ್ರಮಗಳ ದಾಖಲೀಕರಣ ಮಾಡಬೇಕಾಯಿತು. ಈ ಕೊರತೆಯನ್ನು ನಿವಾರಿಸಲು ಹಿರಿಯ ಕಲಾವಿದರ ಮತ್ತು ರಾಘವ ನಂಬಿಯಾರ, ಹಿರಿಯಡಕದ ಗೋಪಾಲ ರಾವ್, ಬನ್ನಂಜೆ ಸಂಜೀವ ಸುವರ್ಣ, ಜಿ. ಕೆ. ಹೆಗಡೆ, ಜಿ. ಎಸ್. ಹೆಗಡೆ, ಜಿ. ಎಲ್. ಹೆಗಡೆ, ದೇವು ಹನೇಹಳ್ಳಿ, ಮನೋಹರ ಕುಂದರ ಮುಂತಾದವರನ್ನು ಒಳಗೊಂಡ ಸಮಗ್ರವಾದ ತಜ್ಞರ ತಂಡದ ಚರ್ಚೆಯನ್ನು ನಾವು ದಾಖಲಿಸಿದ್ದೇವೆ. ಈ ಸಂದರ್ಶನಗಳು ಹಳೆಯ ಕರ್ಕಿಯ ಯಕ್ಷಗಾನ ಸಂಪ್ರದಾಯದ ಗತ ಕಾಲದ ಇತಿಹಾಸ ಮತ್ತು ವೈಭವಗಳ ಮೇಲೆ ಬೆಳಕನ್ನು ಚೆಲ್ಲುತ್ತವೆ.

(೮ ಹಾಗೂ ೯ ಜನವರಿ ೨೦೦೫ರಲ್ಲಿ ದಾಖಲೀಕರಿಸಿದ್ದು.)

ಸಂಚಿಯನ್ನು ಬೆಂಬಲಿಸಿ

ನಮಗೆ ನಿಮ್ಮ ಸಹಾಯ ಬೇಕಾಗಿದೆ. ಸಂಚಿ ಫೌಂಡೇಶನ್ನಿಗೆ ನೀಡುವ ಎಲ್ಲಾ ದೇಣಿಗೆಗಳಿಗೆ ಆದಾಯ ತೆರಿಗೆಯಲ್ಲಿ ೮೦ಜಿ ವಿನಾಯಿತಿ ಇರುತ್ತದೆ.

Creative Commons License
Ninasam Plays Documentation Project 2015 by Sanchi Foundation, Bengaluru is licensed under a Creative Commons Attribution 4.0 International License.

ಸಮುದಾಯದ ಸಹಭಾಗಿತ್ವ

ಸಂಚಿ ಫೌಂಡೇಶನ್ ಸಮುದಾಯದ ಸಹಾಯದಲ್ಲಿ, ಸಹಭಾಗಿತ್ವದಲ್ಲಿ ಬೆಳೆಯುವ ಸಂಸ್ಥೆಯಾಗಿರುತ್ತದೆ. ಹೀಗಾಗಿ ಈ ದಾಖಲೀಕರಣ ಯೋಜನೆಯನ್ನು ಮುಂದಿನ ಹಂತಕ್ಕೆ ಒಯ್ಯಲು, ನಿಮ್ಮ ಸಹಾಯ ಅಗತ್ಯವಾಗಿದೆ. ಮೊದಲಿಗೆ, ದಾಖಲೀಕರಿಸಿದ ನಾಟಕಗಳ ಇಂಗ್ಲೀಷ್ ಉಪಶೀರ್ಷಿಕೆಯನ್ನು ಇತರ ಭಾಷೆಗಳಿಗೆ ಭಾಷಾಂತರಿಸಲು ನಿಮ್ಮ ಸಹಾಯ ಬೇಕಿದೆ. ನಿಮಗೆ ಇದರಲ್ಲಿ ಆಸಕ್ತಿ ಇದ್ದಲ್ಲಿ, ನಮ್ಮನ್ನು ಸಂಪರ್ಕಿಸಿರಿ.

ಕರ್ಕಿ ಶೈಲಿ ಹಾಗೂಪರಂಪರೆ ದಾಖಲೀಕರಣದ ಅಧ್ಯಾಯಗಳು

(ಈ ಕೆಳಗಿನ ಕೊಂಡಿಗಳನ್ನು ಕ್ಲಿಕ್ಕಿಸಿದರೆ, ಅವು ಯೂ-ಟ್ಯೂಬಿನಲ್ಲಿ ಸಂಬಂಧಿಸಿದ ವೀಡಿಯೋ ಭಾಗಕ್ಕೆ ಕರೆದೊಯ್ಯುತ್ತದೆ.)
 • ದಾಖಲೀಕರಣದ ಪರಿಚಯ
 • ಚೌಕಿ ಮನೆ, ಬಣ್ಣಗಾರಿಕೆಯ ಶೈಲಿ
 • ಚೌಕಿ ಪೂಜೆ, ಗಣಪತಿಯ ಸ್ತುತಿ
 • ಅಬ್ಬರ ತಾಳ, ವಿವಿಧ ದೇವರುಗಳ ಸ್ತುತಿ
 • ಆದಿನಾರಾಯಣ ಪಾತ್ರದ ಮುನ್ನುಡಿ ಮತ್ತು ತೆರೆಕುಣಿತ
 • ಕೃಷ್ಣನ ತೆರೆಕುಣಿತ
 • ಕೃಷ್ಣ ಮತ್ತು ಜಾಂಬವಂತರ ಕಾದಾಟ (ಪ್ರಸಂಗ: ಜಾಂಬವತಿ ಪರಿಣಯ)
 • ಹನುಮಂತ ಪಾತ್ರದ ತೆರೆಕುಣಿತ
 • ಲಂಕಿಣಿಯ (ರಕ್ಕಸಿ – ಹೆಣ್ಣು ಬಣ್ಣ) ತೆರೆಕುಣಿತ
 • ಲಂಕಿಣಿಯ ರಾತ್ರಿ ಕಾಲದ ಸಂಚಾರ (ಪ್ರಸಂಗ: ಲಂಕಾ ದಹನ)
 • ಲಂಕಿಣಿ ಮತ್ತು ಹನುಮಂತರ ಯುದ್ಧ  (ಪ್ರಸಂಗ: ಲಂಕಾ ದಹನ)
 • ಶರಸೇತು ಬಂಧನ ಪ್ರಸಂಗದ ಹನುಮಂತನ ಆಯ್ದ ಪದ್ಯಗಳು
 • ಅರ್ಜುನ ಪಾತ್ರದ ಮುನ್ನುಡಿ ಮತ್ತು ತೆರೆಕುಣಿತ
 • ಶಬರ ಪಾತ್ರದ ಮುನ್ನುಡಿ ಮತ್ತು ತೆರೆಕುಣಿತ
 • ಶಬರ ಮತ್ತು ಅರ್ಜುನರ ಯುದ್ಧ (ಪ್ರಸಂಗ: ಕಿರಾತಾರ್ಜುನ ಕಾಳಗ)
 • ಕಿಮ್ಮೀರನ (ರಕ್ಕಸಗಂಡು ಬಣ್ಣ) ತೆರೆಕುಣಿತ
 • ಲಾಲಿ ಕುಣಿತಗಳು
 • ಬಬ್ರುವಾಹನ ಕಾಳಗ ಪ್ರಸಂಗದ ಬಬ್ರುವಾಹನ ಪಾತ್ರದ ಆಯ್ದ ಪದ್ಯಗಳು
 • ಕಲಾವಿದರ ಜೊತೆ ಸಂದರ್ಶನ ಮತ್ತು ಸಂವಾದ
 • ಕಲಾವಿದರು, ತಂತ್ರಜ್ಞರ ಪಟ್ಟಿ

We thank

All who helped this project Directly and indirectly

Special Thanks

Devotees and administration of Sri Karikana Parameshwari Temple | (Karikana, Honnavara U.K)) | Subramanya Bhat (Head priest) | and group of priests (Karikana Parameshwari Temple) | Dr. Mahalinga Bhat, Mangalore | Dr. H.S. Mohan Sagara | Bhagavatha Gopalakrishna Bhat, Jogimane

Characters – Actor

Krishna, Arjuna, Babruvahana – Karki Narayana Hasyagara | Kimmira, Lankini – Karki Krishna Hasyagara | Hanumantha, Shabara Karki Satya Hasyagara | Jambavantha, Bheema – Padmanabha D. Bhat, Shiruru | Shabari, Sakhi – 1 – Nilkodu Ganapathi Hegade, Kumta | Sakhi – Kumara Krishna Hegde, Harikeri | Tere – Gopala Krishna Shambhu Bhat, Kadatoka | Tere – Gajanana Parameshwara Bhat, Karki | Makeup – Mururu Ganapathi Hegde

Accompaniment

Bhagavathike – Gopalakrishna Bhat, Jogimane | Maddale – Mahabaleshawara Bhat, Dharmashala | Chande – Gajanana Bhandari, Holagadde | Shruti – Rajesh Bhat, Kollur | Background singing – Krishna Bhagavata, Kadatoka | Narration – Dr. G.L Hegde

Experts in discussion

Dr. Raghava Nambiyar | Hiriyadka Gopala Rao | Dr. G.S. Hegde | Dr. G.L Hegde | Bannanje Sanjeeva Suvarna | Devu Hanehalli

Sanchi Foundation Documentation team

Camera – Shivaram, Uttam, Chetan, Abhaya Simha | Assistants – Nirin Pilar, Sandeep | Driver – Prashant Bekal | Outdoor unit – CAD media, Mangalore | Editing – Abhijeet Deshpande | Vision Mixing – Austin Pinto | Local co-ordination – Ganesh Krishna (G.K) Hegde, Harikeri | Documentation director – Abhaya Simha

Concept and Produced by

Vidya M and Manohara Upadhya | Devaki G.A and Ashoka Vardhana G.N

Sanchi Foundation

Sanchi Foundation (R) has joined forces with Ninasam for this documentation project. Sanchi  Foundation is a not for profit organization working for the documentation of audio-visual heritage. Sanchi Foundation has a vast experience in audio-visual documentation.

Support by funding Sanchi

You can support “Sanchi Foundation” by donating a small amount. You can also involve yourself in our projects effectively by sharing your ideas, organizing events, implementing and executing projects which make big difference or also by making a small payment towards donations. All donations to Sanchi Foundation (R) get 80G income tax exemption.

About Documentation

Yakshagana Badagu Thittu – Northern Style (Unlike the Thenku Thittu or the Southern Style) has strong traits of performance both regionally and individually. Hence the Yakshagana in and around Udupi and Kundapur is usually referred to as Badagu (North) and the Yakshagana of Uttara Kannada district as Bada-Badagu (North of North).

It has been observed and documented by researchers and scholars that unequivocally Karki Yakshagana traditional style is the one and only original style of Uttara Kannada and is the oldest and representative of Bada-badagu Thittu. Karki Style and Mela have a known long history of 9 generations (around over 200 years). A few variations of Bada-Badagu style emerged over a period of time as a result of self-made changes and adoption of traits of Udupi-Kundapur style of Badagu. These were identified as individual styles like Gharanas in Hindustani music. The public usually identifies the individual styles by the family name of the exponent. (Ex.: Keremane Shivarama Hegde style as Keremane style). However original Karki style continued and identified as Hiriya Paramayya Hasyagar’s style which is also known as Hasyagar’s style or simply Karki style (Family and Regional name).

Karki style has no followers in the younger generation and so has been in decline. We found the main three surviving artists of the style i.e., Krishna Hasyagar, Narayana Hasyagar and Satya Hasyagar who were aged above 70 years at that time.

We also found that the Karki style is fully endorsed by the Veterans in Yakshagana like Hiriyadaka Gopala Rao, Bannanje Sanjeeva Suvarna, Raghava Nambiyar. The inabilities (due to age factor) of the surviving artists to perform a full-fledged Prasanga constrained us to document whatever sequences they could manage. To make up for the lacunae, we have also documented the discussion with a wide panel of experts like Raghava Nambiar, Hiriyadka Gopal Rao, Bannanje Sanjeeva Suvarna, G.K. Hegde, G.S. Hegde, G.L. Hegde, Devu Hanehalli, Manohara Kunder etc. The interviews also shed light on past history and glory of old Karki Yakshagana Tradition.

(Documented on 8 & 9 January 2005)

Support Sanchi

We need your Support. All donations to Sanchi Foundation (R) get 80G income tax exemption.
Creative Commons License
Ninasam Plays Documentation Project 2015 by Sanchi Foundation, Bengaluru is licensed under a Creative Commons Attribution 4.0 International License.
Sanchi Foundation believes in community participation in taking this project to next level. To begin with, we would like to translate the subtitles to all the plays in all possible languages. So if you are willing to help us in this project, please get in touch with us.

Chapters from Yakshagana - Karki Style and Heritage

(Links will open the Youtube URL in a different window)
 • Introduction to the documentation

 • “Chowki mane” Green Room. Makeup style

 • “Chowki Pooje” worshiping Lord Ganesh at the Green Room.

 • “Abbara Taala” the worshiping various deities on the stage.

 • Introduction of ‘Adinarayana’ and Curtain Dance

 • Curtain Dance of Krishna

 • Krishna and Jambavanta Tussle (Episode: Jambavati Parinaya)

 • Hanuma’s Curtain Dance

 • Lankini (Demoness) Curtain Dance

 • Lankini’s stroll in the night (Episode: Lanka Dahana)

 • Lankini and Hanuma Tussle (Episode: Lanka Dahana)

 • Selected songs of Hanuma from Sharasethu Bandhana episode

 • Introduction of Arjuna and Arjuna Curtain Dance

 • Introduction of Shabara and Curtain Dance

 • Shabara and Arjuna Battle (Episode: Kiratarjuna Kalaga)

 • Kimmira, Danava (Demon) Curtain Dance

 • Lali Kunitha (Dance)

 • Selected songs of Babruvahana from Babrivahana Kalaga Episode

 • Interview and Interaction with the Artists

 • End Credits

We thank

All who helped this project Directly and indirectly

Special Thanks

Devotees and administration of Sri Karikana Parameshwari Temple | (Karikana, Honnavara U.K)) | Subramanya Bhat (Head priest) | and group of priests (Karikana Parameshwari Temple) | Dr. Mahalinga Bhat, Mangalore | Dr. H.S. Mohan Sagara | Bhagavatha Gopalakrishna Bhat, Jogimane

Characters – Actor

Krishna, Arjuna, Babruvahana – Karki Narayana Hasyagara | Kimmira, Lankini – Karki Krishna Hasyagara | Hanumantha, Shabara Karki Satya Hasyagara | Jambavantha, Bheema – Padmanabha D. Bhat, Shiruru | Shabari, Sakhi – 1 – Nilkodu Ganapathi Hegade, Kumta | Sakhi – Kumara Krishna Hegde, Harikeri | Tere – Gopala Krishna Shambhu Bhat, Kadatoka | Tere – Gajanana Parameshwara Bhat, Karki | Makeup – Mururu Ganapathi Hegde

Accompaniment

Bhagavathike – Gopalakrishna Bhat, Jogimane | Maddale – Mahabaleshawara Bhat, Dharmashala | Chande – Gajanana Bhandari, Holagadde | Shruti – Rajesh Bhat, Kollur | Background singing – Krishna Bhagavata, Kadatoka | Narration – Dr. G.L Hegde

Experts in discussion

Dr. Raghava Nambiyar | Hiriyadka Gopala Rao | Dr. G.S. Hegde | Dr. G.L Hegde | Bannanje Sanjeeva Suvarna | Devu Hanehalli

Sanchi Foundation Documentation team

Camera – Shivaram, Uttam, Chetan, Abhaya Simha | Assistants – Nirin Pilar, Sandeep | Driver – Prashant Bekal | Outdoor unit – CAD media, Mangalore | Editing – Abhijeet Deshpande | Vision Mixing – Austin Pinto | Local co-ordination – Ganesh Krishna (G.K) Hegde, Harikeri | Documentation director – Abhaya Simha

Concept and Produced by

Vidya M and Manohara Upadhya | Devaki G.A and Ashoka Vardhana G.N

ಸಂಚಿ ಫೌಂಡೇಶನ್

ಸಂಚಿ ಫೌಂಡೇಶನ್ (ನೋ) ನೀನಾಸಮ್ ಬಳಗದೊಂದಿಗೆ ಈ ಯೋಜನೆಗೆ ಕೈ-ಜೋಡಿಸಿದೆ. ಸಂಚಿ ಫೌಂಡೇಶನ್ ಲಾಭರಹಿತ ಸಂಸ್ಥೆಯಾಗಿದ್ದು, ದೃಶ್ಯ-ಶ್ರಾವ್ಯ ಪರಂಪರೆಯ ದಾಖಲೀಕರಣದ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಂಚಿ ಫೌಂಡೇಶನ್ನಿಗೆ ಈ ಕ್ಷೇತ್ರದಲ್ಲಿ ಅಪಾರ ಅನುಭವ ಇರುವುದಲ್ಲದೇ, ತಜ್ಞರ ಬೆಂಬಲವೂ ಇದೆ.

ಸಂಚಿಯ ಶ್ರಮವನ್ನು ಬೆಂಬಲಿಸಿ