ಗುಣಮುಖ

ಕಿರು ಪರಿಚಯ

ಪರ್ಷಿಯಾದ ಖ್ಯಾತ ಚಕ್ರವರ್ತಿ ನಾದಿರ್ ಶಾ ಸುಮಾರು ೬೦ವರ್ಷ ಬದುಕಿದ್ದ (೧೬೮೮-೧೭೪೭) ಅಂದು ಹಿಂದೂಸ್ಥಾನ್ ಎಂದು ಕರೆಯಲ್ಪಡುತ್ತಿದ್ದ ಭಾರತದ ಮೇಲೆ ೧೭೩೯ರಲ್ಲಿ ಧಾಳಿ ಆರಂಭಿಸಿದ ಈತ, ೧೭೪೦ರಲ್ಲಿ ಅಂದು ಆಡಳಿತದಲ್ಲಿದ್ದ ಮುಘಲ್ಲರನ್ನು ಕರ್ನಾಲ್ ಯುದ್ಧದಲ್ಲಿ ಸೋಲಿಸಿ, ದೆಹಲಿಯನ್ನು ವಶಪಡಿಸಿಕೊಂಡ. ಮೌಲ್ಯಹೀನವಾಗಿದ್ದ, ಅಶಕ್ತವಾಗಿದ್ದ ಮುಘಲರ ದಿವಾನರು ಅವರದ್ದೇ ರಾಜನ ವಿರುದ್ಧ ಸಂಚು ಹೂಡುತ್ತಿದ್ದರು. ಈ ಸಮಸ್ಯೆ ಸಾಲದೆಂಬಂತೆ, ಮರಾಠರೂ ಮುಘಲ್ ಸಂಸ್ಥಾನದ ಅನೇಕ ಭಾಗಗಳನ್ನು ವಶಪಡಿಸಿಕೊಂಡಿದ್ದರು.

ಹೀಗಾಗಿ ಹುರುಪಿನಲ್ಲಿದ್ದ ನಾದಿರ್ ಶಾನಿಗೆ ಮುಘಲರು ಒಂದು ಸವಾಲೂ ಆಗಿರಲಿಲ್ಲ, ಸಮವೂ ಆಗಿರಲಿಲ್ಲ. ನಾದಿರ್ ಯುದ್ಧಗಳಲ್ಲಿ ಮಾಗಿದ್ದ ಧಾಳಿಕೋರನಾಗಿದ್ದ. ಯುದ್ಧ ಕಲೆ ಅಥವಾ ಯೋಜನೆಗಳಲ್ಲಿ ಅವನನ್ನು ಮೀರಿಸುವುದು ಅಸಾಧ್ಯವಾಗಿತ್ತು. ಯುದ್ಧದಲ್ಲಿ ಐಶ್ವರ್ಯ, ಆರಾಮಗಳಿಗಿಂತ ಹೆಚ್ಚಾಗಿ ಯುದ್ಧ ತರುತ್ತಿದ್ದ ಕ್ರೌರ್ಯ ನಾದಿರ್ ಶಾನಿಗೆ ರೋಮಾಂಚನವುಂಟು ಮಾಡುತ್ತಿತ್ತು. ಅವನ ಅಸಹನೆ ಎಷ್ಟು ಮಿತಿಮೀರಿತ್ತು ಎಂದರೆ, ಅವನು ರಾಜ್ಯಾಡಳಿತ ಹಾಗೂ ಪ್ರಜೆಗಳ ಒಳಿತಿನ ಬಗ್ಗೆ ಯೋಚನೆ ಮಾಡುವುದನ್ನೇ ಬಿಟ್ಟು, ನಿರಂತರ ಯುದ್ಧಗಳಿಗಾಗಿ ಹಂಬಲಿಸುತ್ತಿದ್ದ. ಅವನು ಅವನ ಸುತ್ತಲಿದ್ದ ಭ್ರಷ್ಟತೆ, ಕಪಟತೆಗಳನ್ನು ಸಹಿಸದವನಾಗಿದ್ದ. ಮುಘಲ್ ಸಾಮ್ರಾಜ್ಯದಲ್ಲಿ ದಟ್ಟವಾಗಿದ್ದ ಇಂಥಾ ವಾತಾವರಣವನ್ನು ಅವನು ದ್ವೇಷಿಸುತ್ತಿದ್ದ. ಇದು ಅವನನ್ನು ಇನ್ನಷ್ಟು ಚಂಚಲ ಹಾಗೂ ಸಂಶಯದ ಗೂಡನ್ನಾಗಿ ಮಾರ್ಪಡಿಸಿತ್ತು.

ನಾದಿರ್, ಎಲ್ಲೂ ಒಂದೆಡೆ ನೆಲೆ ನಿಲ್ಲದಿದ್ದವನು, ಈ ಬಾರಿ ಭಾರತದಲ್ಲಿ, ಇಲ್ಲಿನ ಸಮೃದ್ಧತೆ ಹಾಗೂ ಅರಾಜತೆಯನ್ನು ಕಂಡು ನೆಲೆ ನಿಲ್ಲುವ ಕುರಿತಾಗಿ ಯೋಚಿಸಲಾರಂಭಿಸಿದ್ದ. ಆದರೆ ಅವನಿಗೆ ಪರ್ಶಿಯಾದ ನೆನಪುಗಳೂ ಸೆಳೆಯುತ್ತಲೇ ಇದ್ದವು. ನಾದಿರ್ ಭಾರತದಲ್ಲಿ ನೆಲೆ ನಿಲ್ಲುವ ತನ್ನ ಕನಸು ಹಾಗೂ ಪರ್ಶಿಯಾಗೆ ಹಿಂದಿರುಗುವ ಆಸೆಗಳ ನಡುವೆ ಕಳೆದು ಹೋಗಿದ್ದ. ಅವನು ಖಡ್ಗದ ಅಲಗಿನಿಂದ ತನ್ನನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದ. ಇದು ಅವನ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು. ಈ ನಾಟಕದಲ್ಲಿ ದೊಡ್ಡ ಪಾತ್ರವಹಿಸುವ ಹಕೀಮ ಅಲಾವೀ ಖಾನ್, ನಾದಿರ್ ಶಾನಿಗೆ ಅವನು ಕುಸಿದುಹೋಗುತ್ತಿದ್ದ ದಾರುಣ ನರಕದಿಂದ ಹೊರ ಬರಲು ಸಹಾಯ ಮಾಡುತ್ತಾನೆ.

(ಮೂಲ: ಡಾ.ಎಚ್.ಎಸ್. ಕೋಮಲೇಶ)

ತಿರುಗಾಟ

೧೯೮೫ರಲ್ಲಿ ಆರಂಭವಾದ ನೀನಾಸಮ್ ಸಂಸ್ಥೆಯ ನಾಟಕ ತಂಡವೇ ‘ತಿರುಗಾಟ’. ನೀನಾಸಮ್ ರಂಗ ಶಿಕ್ಷಣ ಕೇಂದ್ರದಿಂದ ತರಬೇತು ಹೊಂದಿದ ಸುಮಾರು ೨೦ ಕಲಾವಿದರ ತಂಡ ಪ್ರತಿ ವರ್ಷ ಸುಮಾರು ಜುಲೈ ತಿಂಗಳಲ್ಲಿ ರೂಪಿಸಲಾಗುತ್ತದೆ. ಈ ತಂಡವು ಆ ವರ್ಷಕ್ಕೆ ನಿಗದಿಪಡಿಸಿದ ನಾಟಕವನ್ನು ಅಭ್ಯಾಸ ಮಾಡಿಕೊಂಡು ಮುಂದಿನ ಮಾರ್ಚ್ ತಿಂಗಳವರೆಗೂ ರಾಜ್ಯಾದ್ಯಂತ ಸಂಚಾರ ಮಾಡುತ್ತದೆ. ಸುಮಾರು ನಾಲ್ಕು ತಿಂಗಳ ಈ ಸಂಚಾರದಲ್ಲಿ ಸರಾಸರಿ ೫೦-೧೦೦ ಕಿಲೋಮೀಟರ್ ದೂರದಲ್ಲಿ ಒಂದರಂತೆ ಪ್ರದರ್ಶನವನ್ನು ನೀಡುತ್ತಾ ಸಾಗುತ್ತದೆ. ಬಹುತೇಕ ಪ್ರತಿ ದಿನ ಎನ್ನುವಂತೆ ಸುಮಾರು ೧೪೦ ದಿನಗಳ ಕಾಲಾವಧಿಯಲ್ಲಿ ೧೨೦ ಪ್ರದರ್ಶನವನ್ನು ತಂಡವು ನೀಡುತ್ತದೆ. ‘ತಿರುಗಾಟ’ವು ಈವರೆಗೆ ೮೫ಕ್ಕೂ ಮಿಕ್ಕು ನಾಟಕಗಳನ್ನು ೩೪೦೦ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಪ್ರದರ್ಶಿಸಿದೆ. ಈವರೆಗೆ ೨೦ ಲಕ್ಷಕ್ಕೂ ಮೀರಿ ಪ್ರೇಕ್ಷಕರನ್ನು ತಲುಪಿದ ಹಿರಿಮೆ ‘ತಿರುಗಾಟ’ದ್ದು! ತಿರುಗಾಟದ ಮತ್ತೊಂದು ಹೆಮ್ಮೆಯ ವಿಷಯ ಎಂದರೆ, ಅದರ ೮೦% ಪ್ರದರ್ಶನಗಳು ಸಣ್ಣ ಊರು ಅಥವಾ ಹಌಗಳಲ್ಲೇ ಆಗಿವೆ. ಹೀಗಾಗಿ ಕರ್ನಾಟಕದ ಪ್ರತಿಯೊಂದು ಜಿಲ್ಲೆಯನ್ನೂ ಪ್ರತಿವರ್ಷವೂ ತಲುಪುತ್ತಿದೆ ‘ತಿರುಗಾಟ’. ಈ ತಂಡಕ್ಕೆ ಆಯ್ಕೆ ಮಾಡುವ ನಾಟಕಗಳು ಪಾಶ್ಚಾತ್ಯ, ಭಾರತೀಯ ಹಾಗೂ ಕನ್ನಡ ಈ ಮೂರರಲ್ಲಿ ಎರಡಾದರೂ ಇರುವಂತೆ ನೋಡಿಕೊಳ್ಳಲಾಗುತ್ತದೆ. ಈ ನಾಟಕಗಳನ್ನು ಕರ್ನಾಟಕ ಅಥವಾ ಕರ್ನಾಟಕದ ಹೊರಗಿನಿಂದ ಆಹ್ವಾನಿಸಲಾದ ನಿರ್ದೇಶಕರು ನಿರ್ದೇಶಿಸುತ್ತಾರೆ.

Ninasam Plays Documentation

ತಾರ್ತೂಫ್ ನೋಡಲು ಕ್ಲಿಕ್ಕಿಸಿ

Tartuffe

ಒರೆಸ್ತಿಸ್ ಪುರಾಣ ನೋಡಲು ಕ್ಲಿಕ್ಕಿಸಿ

Oresthis

ಸಂಚಿಯನ್ನು ಬೆಂಬಲಿಸಿ

ನಮಗೆ ನಿಮ್ಮ ಸಹಾಯ ಬೇಕಾಗಿದೆ. ಸಂಚಿ ಫೌಂಡೇಶನ್ನಿಗೆ ನೀಡುವ ಎಲ್ಲಾ ದೇಣಿಗೆಗಳಿಗೆ ಆದಾಯ ತೆರಿಗೆಯಲ್ಲಿ ೮೦ಜಿ ವಿನಾಯಿತಿ ಇರುತ್ತದೆ.

ಗುಣಮುಖ ನಾಟಕದ ಕುರಿತಾಗಿ ಹೆಚ್ಚಿನ ಮಾಹಿತಿ ಪಡೆಯಿರಿ

ಈ ನಾಟಕದ ತಾಂತ್ರಿಕ, ಸೃಜನಾತ್ಮಕ ವಿಷಯಗಳನ್ನು ತಿಳಿಯಲು ಈ ಕೆಳಗಿನ ಕೊಂಡಿಗಳನ್ನು ಬಳಸಬಹುದಾಗಿದೆ.

(ಈ ಕೊಂಡಿಗಳು ಪ್ರತ್ಯೇಕ ಯೂ-ಟ್ಯೂಬ್ ವಿಭಾಗಕ್ಕೆ ತಮ್ಮನ್ನು ಕರೆದೊಯ್ಯುತ್ತವೆ.)

ಸಮುದಾಯದ ಸಹಭಾಗಿತ್ವ

ಸಂಚಿ ಫೌಂಡೇಶನ್ ಸಮುದಾಯದ ಸಹಾಯದಲ್ಲಿ, ಸಹಭಾಗಿತ್ವದಲ್ಲಿ ಬೆಳೆಯುವ ಸಂಸ್ಥೆಯಾಗಿರುತ್ತದೆ. ಹೀಗಾಗಿ ಈ ದಾಖಲೀಕರಣ ಯೋಜನೆಯನ್ನು ಮುಂದಿನ ಹಂತಕ್ಕೆ ಒಯ್ಯಲು, ನಿಮ್ಮ ಸಹಾಯ ಅಗತ್ಯವಾಗಿದೆ. ಮೊದಲಿಗೆ, ದಾಖಲೀಕರಿಸಿದ ನಾಟಕಗಳ ಇಂಗ್ಲೀಷ್ ಉಪಶೀರ್ಷಿಕೆಯನ್ನು ಇತರ ಭಾಷೆಗಳಿಗೆ ಭಾಷಾಂತರಿಸಲು ನಿಮ್ಮ ಸಹಾಯ ಬೇಕಿದೆ. ನಿಮಗೆ ಇದರಲ್ಲಿ ಆಸಕ್ತಿ ಇದ್ದಲ್ಲಿ, ನಮ್ಮನ್ನು ಸಂಪರ್ಕಿಸಿರಿ.

ನಾಟಕಗಳ ದಾಖಲೀಕರಣ ಒಂದು ಅದ್ಭುತವಾದ ಆಕರವಾಗಲಿದೆ. ಇದು ನಮಗೆ ವಿದ್ಯಾರ್ಥಿಗಳಿಗೆ ವಿಭಿನ್ನ ನಾಟಕಗಳನ್ನು ಪರಿಚಯಿಸಲು ಸಹಕಾರಿಯಾಗಲಿದೆ. ನಾಟಕವನ್ನು ಕಲಿಸುವ ಶಿಕ್ಷಕನಾಗಿ ನನಗೆ ಇಂಥಾ ದಾಖಲೀಕರಣದ ಅಗತ್ಯ ಬಹಳ ಬಾರಿ ತೀವ್ರವಾಗಿ ಕಾಡಿದೆ.

ಮಂಜು ಕೊಡಗು

ನೀನಾಸಮ್

ಗುಣಮುಖ ಪ್ರದರ್ಶಿಸಿದ ತಂಡ

ಹೆಗ್ಗೋಡಿನ ನೀನಾಸಮ್ ಬಳಗಕ್ಕೆ ಆಭಾರಿಯಾಗಿದ್ದೇವೆ.

ಯೋಜನೆ ಕಾರ್ಯರೂಪಕ್ಕೆ ಬರಲು ಪ್ರತ್ಯಕ್ಷ-ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.

ದಾಖಲೀಕರಣಕ್ಕೆ ಧನ ಸಹಾಯ ನೀಡಿದವರು

ಅಶೋಕ ವರ್ಧನ | ಇಲಾ ಎಸ್. ಭಟ್ | ಶೈಲಜಾ ಎಸ್. ಭಟ್ | ಎಂ. ಟಿ. ಹೆಬ್ಬಾರ್ | ಎಚ್. ಸುಂದರ ರಾವ್ | ಡಾ. ಕೃಷ್ಣ ಮೋಹನ್ ಪ್ರಭು | ಡಾ. ನಿಸರ್ಗ | ಪ್ರಸನ್ನ ಕೆ.ಆರ್ | ವಚನ್ ಶೆಟ್ಟಿ

ಸಂಚಿ ಫೌಂಡೇಷನ್ ದಾಖಲೀಕರಣ ತಂಡ

ಛಾಯಾಗ್ರಹಣ – ವಿಷ್ಣುಪ್ರಸಾದ್, ಲಕ್ಷ್ಮಣ್ ನಾಯಕ್, ಸೋಮನಾಥ | ಛಾಯಾಗ್ರಹಣ ಸಹಾಯ – ಅವಿನಾಶ್ | ಧ್ವನಿ ಗ್ರಹಣ ಹಾಗೂ ಸಂಸ್ಕರಣ – ಜೇಮಿ ಡಿಸಿಲ್ವ | ಪೂರಕ ಧ್ವನಿ ಗ್ರಹಣ – ಶಿಶಿರ ಕೆ.ವಿ | ನಾಟಕಗಳ ಸಂಕಲನ – ಪ್ರಶಾಂತ್ ಪಂಡಿತ್ | ಸಂದರ್ಶನಗಳು – ಎನ್..ಎಂ ಇಸ್ಮಾಯಿಲ್ |ಸಂದರ್ಶನ ಸಂಕಲನ – ಅಭಯ ಸಿಂಹ | ಅಂತರ್ಜಾಲ ನಿರ್ವಹಣೆ – ಓಂಶಿವಪ್ರಕಾಶ್ | ಉಪಶೀರ್ಷಿಕೆಗಳು – ಅವಿನಾಶ್ ಜಿ. | ಛಾಯಾಗ್ರಹಣ – ಪವಿತ್ರಾ, ಓಂಶಿವಪ್ರಕಾಶ್ | ದಾಖಲೀಕರಣ ನಿರ್ದೇಶನಅಭಯ ಸಿಂಹ

ನೀನಾಸಮ್ ತಿರುಗಾಟ 2015 – ಪಿ. ಲಂಕೇಶ್ ಅವರ ನಾಟಕ ‘ಗುಣಮುಖ’

ಸಂಗೀತ ವಿನ್ಯಾಸ – ಅಕ್ಷರ ಕೆ.ವಿ. | ವಿನ್ಯಾಸ, ನಿರ್ದೇಶನ – ಮಂಜು ಕೊಡಗು । ಗುಣಮುಖ ಪಾತ್ರವರ್ಗ – ಅವಿನಾಶ್ ರೈ ಎಮ್.ಕೆ. (ನಾದಿರ್ ಷಾ) |ಚಂದನ್ ಎಮ್. (ನಜೀರುದ್ದಿನ್ ಷಾ, ಶಂಶುದ್ದೀನ್ ಖಾನ್, ಸಹಾಯಕ, ಮೇಳ) | ದಯಾನಂದ್ ಪಲ್ಲವಗೆರೆ (ನಿಜಾಮ್ಉಲ್ಮುಲ್ಕ್, ನರ್ತಕ) |ನಾಗರಾಜ ಶಿರಸಿ (ನಜೀರ್, ಮೇಳ, ಅಪ್ಫಜಲ್, ಶಂಶುದ್ದೀನ್ ಖಾನ್, ಪ್ರಾರ್ಥನೆಯ ಗುಂಪು) | ಬಿಂದು ರಕ್ಷಿದಿ (ಅಲಾವಿಖಾನ್, ಮೇಳ) | ಮನೋಜ್ ಸುಖ್‍ದೇವ್ (ತನ್ವೀರ್, ಹಾಡುಗಾರ, ಪ್ರಾರ್ಥನೆಯ ಗುಂಪು) | ಮೋಹನ್ ಶೇಣಿ (ರಜ್ವಿ) | ಶರತ್ ಎಸ್. (ಸಾದತ್ ಖಾನ್, ನರ್ತಕ, ಹಮೀದ್ ಪ್ರಾರ್ಥನೆಯ ಗುಂಪು, ಮಮ್ತಾಜ್, ಮೇಳ) | ಶ್ರುತಿ ವಿ. ತಿಪಟೂರು (ಇಕ್ಬಾಲ್, ಪರ್ಷಿಯನ್ ದೂತ, ಮೇಳ, ಪಾಷಾ, ಫರೂಕ್, ಪ್ರಾರ್ಥನೆಯ ಗುಂಪು)

ಬೆಳಕುಅವಿನಾಶ್ ರೈ ಎಮ್.ಕೆ., ದಯಾನಂದ್ ಪಲ್ಲವಗೆರೆ, ನಾಗರಾಜ ಸಿರಸಿ | ಬೆಳಕಿನ ನಿರ್ವಹಣೆ – ಮಂಜು ಸಿರಿಗೇರಿ | ರಂಗಸಜ್ಜಿಕೆ – ಮೋಹನ್ ಶೇಣಿ, ಮನೋಜ್ ಸುಖ್‍ದೇವ್, ಶರತ್ ಎಸ್., ಶುಭಕರ | ವೇಷಭೂಷಣ – ಶ್ರುತಿ ವಿ., ಚಂದನ್ ಎಮ್. | ಪ್ರಸಾಧನ – ಶಿಲ್ಪಾ ಎಸ್. | ಪರಿಕರ – ಬಿಂದು ರಕ್ಷಿದಿ | ಸಂಗೀತ/ಧ್ವನಿ – ರವಿಕುಮಾರ ಬಿ. | ರಂಗ ನಿರ್ವಹಣೆ – ಅವಿನಾಶ್ ರೈ ಎಮ್.ಕೆ. | ರಂಗ ಚಲನೆ – ಸೂರಜ್ ಬಿ.ಆರ್. | ನೃತ್ಯವಿನ್ಯಾಸ– ವಿನೀತ್ ಕುಮಾರ್ | ವಸ್ತ್ರವಿನ್ಯಾಸ – ವಿದ್ಯಾ ಹೆಗಡೆ | ಬೆಳಕಿನ ವಿನ್ಯಾಸ – ಕೃಷ್ಣಮೂರ್ತಿ ಎಮ್.ಎಮ್. | ಸಂಚಾರ ವ್ಯವಸ್ಥಾಪಕ – ಹನಮಪ್ಪ ಚಂದಪ್ಪ ಚಲವಾದಿ | ಕಛೇರಿ ನಿರ್ವಹಣೆಶ್ರೀಕಾಂತ ಜಿ. ಆರ್. | ಯೋಜನೆ ಮತ್ತು ನಿರ್ವಹಣೆ – ಶ್ರೀಪಾದ ಟಿ. ಭಾಗವತ್

ಸಂಚಿ ಫೌಂಡೇಶನ್

ಸಂಚಿ ಫೌಂಡೇಶನ್ (ನೋ) ನೀನಾಸಮ್ ಬಳಗದೊಂದಿಗೆ ಈ ಯೋಜನೆಗೆ ಕೈ-ಜೋಡಿಸಿದೆ. ಸಂಚಿ ಫೌಂಡೇಶನ್ ಲಾಭರಹಿತ ಸಂಸ್ಥೆಯಾಗಿದ್ದು, ದೃಶ್ಯ-ಶ್ರಾವ್ಯ ಪರಂಪರೆಯ ದಾಖಲೀಕರಣದ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಂಚಿ ಫೌಂಡೇಶನ್ನಿಗೆ ಈ ಕ್ಷೇತ್ರದಲ್ಲಿ ಅಪಾರ ಅನುಭವ ಇರುವುದಲ್ಲದೇ, ತಜ್ಞರ ಬೆಂಬಲವೂ ಇದೆ.

ಈ ಯೋಜನೆಗೆ ಧನ ಸಹಾಯ ನೀಡಿ ಬೆಂಬಲಿಸಿ

ಈ ಯೋಜನೆಗೆ ಅಗತ್ಯ ಹಣವನ್ನು ಸಮುದಾಯದ ಬೆಂಬಲದಿಂದಲೇ ಸಂಗ್ರಹಿಸುವ ಆಶಯ ಸಂಚಿ ಫೌಂಡೇಶನ್ನಿಗೆ ಇದೆ. ಎಲ್ಲಾ ದಾನಿಗಳಿಗೂ ಸಂಚಿ ಫೌಂಡೇಶನ್ನಿನ ಕಡೆಯಿಂದ ರಶೀದಿ ದೊರೆಯುತ್ತದೆ. ಸಂಚಿಗೆ ನೀಡಿದ ದೇಣಿಗೆಗಳು ಆದಾಯ ತೆರಿಗೆಯಲ್ಲಿ ೮೦ಜಿ ವಿನಾಯಿತಿಯನ್ನೂ ಪಡೆಯುತ್ತವೆ. ಸಂಚಿಯ ಈ ಕೆಲಸವನ್ನು ಮುಂದುವರೆಸಿಕೊಂಡು ಹೋಗಲು ಸಹಾಯ ಮಾಡಿ, ನಮ್ಮನ್ನು ಬೆಂಬಲಿಸಿ. ನಿಮಗೆ ಸಾಧ್ಯವಾದಷ್ಟು ದೇಣಿಗೆಯನ್ನು ದಯವಿಟ್ಟು ನೀಡಿ.