ತಾರ್ತೂಫ್

ಕಿರು ಪರಿಚಯ

ಆರ್ಗಾನ್ ಹಾಗೂ ಅವನ ತಾಯಿ ತಾರ್ತೂಫ್ ಎನ್ನುವ ಗೋಮುಖ ವ್ಯಾಘ್ರನ (ಆರ್ಗಾನ್ ಪರಿಚಯಕ್ಕಿಂತ ಮೊದಲು ದರಿದ್ರನೂ ಆಗಿದ್ದ) ಬಲೆಯಲ್ಲಿ ಸಂಪೂರ್ಣವಾಗಿ ಸಿಕ್ಕಿಹಾಕಿಕೊಂಡಿರುವುದರಿಂದ ಆರ್ಗಾನ್ ಕುಟುಂಬ ಅವನ ಮೇಲೆ ಸಿಟ್ಟುಕೊಂಡಿರುವಾಗ ಈ ನಾಟಕದ ಕಥೆ ಆರಂಭವಾಗುತ್ತದೆ. ತಾರ್ತೂಫ್ ಧರ್ಮಬೀರುವಿನ ಸೋಗುಹಾಕಿ ದೈವೀ-ಅಧಿಕಾರದಿಂದ ಮಾತನಾಡುತ್ತಾ ಜಾಲವನ್ನು ಎಷ್ಟು ಅದ್ಭುತವಾಗಿ ಹೆಣೆದಿರುತ್ತಾನೆಂದರೆ, ಆರ್ಗಾನ್ ಹಾಗೂ ಅವನ ತಾಯಿ ತಾರ್ತುಫ್ ಸಲಹೆಯಿಲ್ಲದೇ ಯಾವುದೇ ಕೆಲಸವನ್ನು ಮಾಡಲಾಗದ ಸ್ಥಿತಿಯನ್ನು ತಲುಪಿರುತ್ತಾರೆ.

ತಾರ್ತೂಫನ ಚಮತ್ಕಾರಗಳು ಮನೆಯಲ್ಲಿನವರ ಹಾಗೂ ಮನೆಯ ಹಿತೈಷಿಗಳಾದ ಇತರರ ಕಣ್ಣಿಗೆ ಮಂಕುಬೂದಿಯೆರಚಲು ವಿಫಲವಾಗಿರುತ್ತದೆ. ಅವರು ತಾರ್ತೂಫನನ್ನು ಕಂಡರೆ ಅಸಹ್ಯಪಡುತ್ತಿರುತ್ತಾರೆ. ಆರ್ಗಾನ್ ಇದ್ದಕ್ಕಿದ್ದಂತೆ ತನ್ನ ಮಗಳಾದ ಮರಿಯಾನಾಳನ್ನು (ಆಗಲೇ ವಲೇರನಿಗೆ ವಿವಾಹ ನಿಶ್ಚಯಗೊಂಡಿದ್ದವಳನ್ನು) ತಾರ್ತೂಫನಿಗೆ ಮದುವೆ ಮಾಡಿಕೊಡುವ ಯೋಜನೆಯನ್ನು ಸಾರುತ್ತಲೇ ಪರಿಸ್ಥಿತಿ ತೀರಾ ವಿಕೋಪಕ್ಕೆ ತಿರುಗುತ್ತದೆ. ಮರಿಯಾನಾಳಿಗೆ ತೀವ್ರ ದುಃಖಃವಾಗುತ್ತದೆ. ಮನೆಯವರಿಗೆ ತಾರ್ತೂಫನ ಬಲೆಯೊಳಗೆ ಆರ್ಗಾನ್ ಹೇಗೆ ಸಿಲುಕಿದ್ದಾನೆಂಬುದನ್ನು ಕಂಡು ಅಚ್ಚರಿಯಾಗುತ್ತದೆ.

ಆರ್ಗಾನನಿಗೆ ತಾರ್ತೂಫನ ನಿಜಸ್ವರೂಪವನ್ನು ತೋರಿಸಲು ಕುಟುಂಬದವರು ಒಂದು ಉಪಾಯ ಹೂಡುತ್ತಾರೆ. ಅವರು ಆರ್ಗಾನನ ಪತ್ನಿ ಅಲ್ಮೀರಾಳಿಗೆ ತಾರ್ತೂಫ್ ಪ್ರೇಮನಿವೇದನೆ ಮಾಡಿಕೊಳ್ಳುವಂತೆ, ತನ್ಮೂಲಕ ಆರ್ಗಾನ್ ಕೈಗೆ ಸಿಲುಕಿಕೊಳ್ಳುವಂತೆ ಮಾಡಲು ಯೋಚಿಸುತ್ತಾರೆ. ಧರ್ಮಬೀರುವಾದ ಅದೂ ಮನೆಗೆ ಅತಿಥಿಯಾಗಿ ಬಂದಿರುವವನೊಬ್ಬನಿಗೆ ಇಂಥಾ ಯೋಚನೆ ಬರುವುದು, ಅದೂ ಮನೆಯೊಡತಿಯ ಮೇಲೇ ಮನಸ್ಸಾಗುವುದು ಅತ್ಯಂತ ಹೀನ ವಿಷಯವಾಗಿದ್ದು, ತಾರ್ತೂಫ್ ಹಾಗೇನಾದರೂ ಮನಸ್ಸು ಮಾಡಿದಲ್ಲಿ, ಆರ್ಗಾನ್ ಮನಸ್ಸು ಪರಿವರ್ತಿತವಾಗುವುದರಲ್ಲಿ ಕುಟುಂಬದವರಿಗೆ ಯಾವ ಸಂಶಯವೂ ಇರುವುದಿಲ್ಲ. ಅವರ ಯೋಜನೆಯಂತೆಯೇ ತಾರ್ತೂಫ್ ಸಿಲುಕಿಕೊಂಡರೂ, ಆರ್ಗಾನನ ಮಗ ಡಾಮಿಸ್ ತನ್ನ ಭಾವೋದ್ವೇಗವನ್ನು ತಡೆಯಲಾಗದೇ ಮಧ್ಯ ಪ್ರವೇಷಿಸಿದ್ದರಿಂದ ಯೋಜನೆ ವಿಫಲವಾಗುತ್ತದೆ.

ತಾರ್ತೂಫನಿಗೆ ಮೊದಲು ಇದರಿಂದ ಆಘಾತವಾದರೂ, ಆತ ಬೇಗನೇ ಸುಧಾರಿಸಿಕೊಳ್ಳುತ್ತಾನೆ. ಆರ್ಗಾನ್ ಮನೆಗೆ ಬಂದಾಗ ದಾಮಿಸ್ ಗೆದ್ದ ಸಂಭ್ರಮದಲ್ಲಿ ವಿಷಯವನ್ನೆಲ್ಲಾ ತಿಳಿಸುತ್ತಾನೆ. ತಾರ್ತೂಫ್ ತಿರುಮಂತ್ರವನ್ನು ಪ್ರಯೋಗಿಸಿ ತನ್ನನ್ನೇ ತಾನು ನಿಂದಿಸಿಕೊಳ್ಳಲಾರಂಭಿಸುತ್ತಾನೆ. ಆರ್ಗಾನ್ ತಾರ್ತೂಫನ ಮೇಲೆ ಮರುಕಹೊಂದಿ ದಾಮಿಸ್ ಸುಳ್ಳು ಹೇಳುತ್ತಿದ್ದಾನೆ ಎನ್ನುವ ನಿರ್ಧಾರಕ್ಕೆ ಬಂದುಬಿಡುತ್ತಾನೆ. ಅವನನ್ನು ಮನೆಯಿಂದಾಚೆಗೆ ಅಟ್ಟುತ್ತಾನೆ. ಅಷ್ಟೇ ಅಲ್ಲದೆ, ದಾಮಿಸನಿಗೆ ಬುದ್ಧಿ ಕಲಿಸಲು, ಆರ್ಗಾನ್ ತನ್ನ ಹೆಂಡತಿಯ ಸುತ್ತಲೇ ತಾರ್ತೂಫ್ ಇನ್ನು ಮುಂದೆ ಇರಬೇಕು ಎಂದು ಆಜ್ಞಾಪಿಸುತ್ತಾನೆ. ತಾರ್ತೂಫನಿಗೆ ತನ್ನೆಲ್ಲಾ ಚರಾಚರ ಆಸ್ತಿಗಳನ್ನು ಕೊಡುವುದಾಗಿ ಆರ್ಗಾನ್ ಘೋಷಿಸಿಬಿಡುತ್ತಾನೆ.

ನಡೆದ ಎಲ್ಲಾ ಘಟನೆಗಳಿಂದ ವಿಚಲಿತಳಾದ ಎಲ್ಮೀರಾ, ಆರ್ಗಾನನಿಗೆ ನಂಬಿಕೆ ಮೂಡಿಸುವ ಹೊಣೆಯನ್ನು ಹೊರುತ್ತಾಳೆ. ಆತನಿಗೆ ಮೇಜಿನಡಿಯಲ್ಲಿ ಅಡಗಿ ಸ್ವಂತ ಕಣ್ಣುಗಳಲ್ಲಿ ಮುಂದೆ ನಡೆಯುವ ವಿದ್ಯಮಾನಗಳನ್ನು ನೋಡಲು ಹೇಳುತ್ತಾಳೆ. ಅರೆ ಮನಸ್ಸಿನಲ್ಲೇ ಇದಕ್ಕೆ ಆರ್ಗಾನ್ ಸಮ್ಮತಿಸುತ್ತಾನೆ. ಎಲ್ಮೀರಾ ಸುಳ್ಳು ಹೇಳುತ್ತಿದ್ದಾಳೆಂದೇ ಅವನ ನಂಬಿಕೆಯಾಗಿರುತ್ತದೆ. ಆದರೆ ಮುಂದೆ ನಡೆಯುವ ಘಟನೆಗಳಿಂದ ಆತನ ಮನಸ್ಸು ನಿಧಾನಕ್ಕೆ ಪರಿವರ್ತಿತವಾಗುತ್ತದೆ. ಕೋಣೆಗೆ ಬರುವ ತಾರ್ತೂಫ್ ಯಾರೂ ಇಲ್ಲದ ಸಮಯ ಎಂದು ಭಾವಿಸಿ ತನ್ನ ಪ್ರೇಮವನ್ನು ಎಲ್ಮೀರಾ ಬಳಿ ನಿವೇದಿಸಲಾರಂಭಿಸುತ್ತಾನೆ. ಎಲ್ಮೀರಾಳೂ ಠಕ್ಕು ಪ್ರೇಮ ನಟಿಸಲು, ತಾರ್ತೂಫ್ ತನ್ನ ಎಲ್ಲೆಯನ್ನು ಮೀರುತ್ತಾ ಸಾಗುತ್ತಾನೆ. ಆತ ಇನ್ನೇನು ತೀರಾ ಹದ್ದುಮೀರುವ ಮೊದಲೇ ಆರ್ಗಾನ್ ತನ್ನ ಅಡಗಿದ್ದ ಸ್ಥಾನದಿಂದ ಹೊರಗೆ ಬಂದು ತಾರ್ತೂಫನನ್ನು ತಡೆಯುತ್ತಾನೆ. ಆತ ತಾರ್ತೂಫನಿಗೆ ಕೂಡಲೇ ತನ್ನ ಮನೆ ಬಿಟ್ಟು ತೊಲಗುವಂತೆ ಹೇಳುತ್ತಾನೆ. ಮೊದಲಿಗೆ ತಾರ್ತೂಫ್ ತನ್ನ ಮಾಮೂಲಿ ಠಕ್ಕನ್ನು ಪ್ರದರ್ಶಿಸುತ್ತಾನೆ. ಆದರೆ ಈ ಬಾರಿ ಆರ್ಗಾನ್ ತನ್ನ ಬಲೆಗೆ ಸಿಲುಕುತ್ತಿಲ್ಲ ಎಂದು ಅನಿಸಲಾರಂಭಿಸಿದಾಗ ಆತ ತಿರುಗಿ ಬೀಳುತ್ತಾನೆ. ಆರ್ಗಾನಿಗೆ ಆತ ಎಲ್ಲಾ ಆಸ್ತಿ ತನಗೆ ಬರೆದುಕೊಟ್ಟಿರುವುದನ್ನು ನೆನಪಿಸುತ್ತಾನೆ. ಆತನೇ ಮನೆ ಬಿಟ್ಟು ಹೋಗಬೇಕು ಎನ್ನುವುದನ್ನು ನೆನಪಿಸುತ್ತಾನೆ. ಆದರೆ ಕೊನೆಯ ಕ್ಷಣದಲ್ಲಿ, ಆ ಕಾಲದಲ್ಲಿ ಸಾಧುವಾದ, ನ್ಯಾಯವಂತ ರಾಜ ಆರ್ಗಾನ್ ಮಾಡಿದ್ದ ಕರಾರನ್ನು ರದ್ದುಗೊಳಿಸಿ, ಎಲ್ಲಾ ಆಸ್ತಿಯನ್ನು ಆರ್ಗಾನಿಗೆ ಮರಳಿಸುತ್ತಾನೆ. ಅಂತೆಯೇ ತಾರ್ತೂಫನಿಗೆ ತಕ್ಕ ಶಾಸ್ತಿಯನ್ನೂ ಮಾಡುತ್ತಾನೆ.

ಮೂಲ: ತಾರ್ತೂಫ್ – ವಿಕಿಪೀಡಿಯಾ

ತಿರುಗಾಟ

೧೯೮೫ರಲ್ಲಿ ಆರಂಭವಾದ ನೀನಾಸಮ್ ಸಂಸ್ಥೆಯ ನಾಟಕ ತಂಡವೇ ‘ತಿರುಗಾಟ’. ನೀನಾಸಮ್ ರಂಗ ಶಿಕ್ಷಣ ಕೇಂದ್ರದಿಂದ ತರಬೇತು ಹೊಂದಿದ ಸುಮಾರು ೨೦ ಕಲಾವಿದರ ತಂಡ ಪ್ರತಿ ವರ್ಷ ಸುಮಾರು ಜುಲೈ ತಿಂಗಳಲ್ಲಿ ರೂಪಿಸಲಾಗುತ್ತದೆ. ಈ ತಂಡವು ಆ ವರ್ಷಕ್ಕೆ ನಿಗದಿಪಡಿಸಿದ ನಾಟಕವನ್ನು ಅಭ್ಯಾಸ ಮಾಡಿಕೊಂಡು ಮುಂದಿನ ಮಾರ್ಚ್ ತಿಂಗಳವರೆಗೂ ರಾಜ್ಯಾದ್ಯಂತ ಸಂಚಾರ ಮಾಡುತ್ತದೆ. ಸುಮಾರು ನಾಲ್ಕು ತಿಂಗಳ ಈ ಸಂಚಾರದಲ್ಲಿ ಸರಾಸರಿ ೫೦-೧೦೦ ಕಿಲೋಮೀಟರ್ ದೂರದಲ್ಲಿ ಒಂದರಂತೆ ಪ್ರದರ್ಶನವನ್ನು ನೀಡುತ್ತಾ ಸಾಗುತ್ತದೆ. ಬಹುತೇಕ ಪ್ರತಿ ದಿನ ಎನ್ನುವಂತೆ ಸುಮಾರು ೧೪೦ ದಿನಗಳ ಕಾಲಾವಧಿಯಲ್ಲಿ ೧೨೦ ಪ್ರದರ್ಶನವನ್ನು ತಂಡವು ನೀಡುತ್ತದೆ. ‘ತಿರುಗಾಟ’ವು ಈವರೆಗೆ ೮೫ಕ್ಕೂ ಮಿಕ್ಕು ನಾಟಕಗಳನ್ನು ೩೪೦೦ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಪ್ರದರ್ಶಿಸಿದೆ. ಈವರೆಗೆ ೨೦ ಲಕ್ಷಕ್ಕೂ ಮೀರಿ ಪ್ರೇಕ್ಷಕರನ್ನು ತಲುಪಿದ ಹಿರಿಮೆ ‘ತಿರುಗಾಟ’ದ್ದು! ತಿರುಗಾಟದ ಮತ್ತೊಂದು ಹೆಮ್ಮೆಯ ವಿಷಯ ಎಂದರೆ, ಅದರ ೮೦% ಪ್ರದರ್ಶನಗಳು ಸಣ್ಣ ಊರು ಅಥವಾ ಹಌಗಳಲ್ಲೇ ಆಗಿವೆ. ಹೀಗಾಗಿ ಕರ್ನಾಟಕದ ಪ್ರತಿಯೊಂದು ಜಿಲ್ಲೆಯನ್ನೂ ಪ್ರತಿವರ್ಷವೂ ತಲುಪುತ್ತಿದೆ ‘ತಿರುಗಾಟ’. ಈ ತಂಡಕ್ಕೆ ಆಯ್ಕೆ ಮಾಡುವ ನಾಟಕಗಳು ಪಾಶ್ಚಾತ್ಯ, ಭಾರತೀಯ ಹಾಗೂ ಕನ್ನಡ ಈ ಮೂರರಲ್ಲಿ ಎರಡಾದರೂ ಇರುವಂತೆ ನೋಡಿಕೊಳ್ಳಲಾಗುತ್ತದೆ. ಈ ನಾಟಕಗಳನ್ನು ಕರ್ನಾಟಕ ಅಥವಾ ಕರ್ನಾಟಕದ ಹೊರಗಿನಿಂದ ಆಹ್ವಾನಿಸಲಾದ ನಿರ್ದೇಶಕರು ನಿರ್ದೇಶಿಸುತ್ತಾರೆ.

Ninasam Plays Documentation

ಒರೆಸ್ತಿಸ್ ಪುರಾಣ ನೋಡಲು ಕ್ಲಿಕ್ಕಿಸಿ

Oresthis

ಗುಣಮುಖ ನೋಡಲು ಕ್ಲಿಕ್ಕಿಸಿ

Gunamukha

ಸಂಚಿಯನ್ನು ಬೆಂಬಲಿಸಿ

ನಮಗೆ ನಿಮ್ಮ ಸಹಾಯ ಬೇಕಾಗಿದೆ. ಸಂಚಿ ಫೌಂಡೇಶನ್ನಿಗೆ ನೀಡುವ ಎಲ್ಲಾ ದೇಣಿಗೆಗಳಿಗೆ ಆದಾಯ ತೆರಿಗೆಯಲ್ಲಿ ೮೦ಜಿ ವಿನಾಯಿತಿ ಇರುತ್ತದೆ.

ತಾರ್ತೂಫ್ ಕುರಿತಾಗಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ

ಈ ನಾಟಕದ ತಾಂತ್ರಿಕ, ಸೃಜನಾತ್ಮಕ ವಿಷಯಗಳನ್ನು ತಿಳಿಯಲು ಈ ಕೆಳಗಿನ ಕೊಂಡಿಗಳನ್ನು ಬಳಸಬಹುದಾಗಿದೆ.

(ಈ ಕೊಂಡಿಗಳು ಪ್ರತ್ಯೇಕ ಯೂ-ಟ್ಯೂಬ್ ವಿಭಾಗಕ್ಕೆ ತಮ್ಮನ್ನು ಕರೆದೊಯ್ಯುತ್ತವೆ.)

ಸಮುದಾಯದ ಸಹಭಾಗಿತ್ವ

ಸಂಚಿ ಫೌಂಡೇಶನ್ ಸಮುದಾಯದ ಸಹಾಯದಲ್ಲಿ, ಸಹಭಾಗಿತ್ವದಲ್ಲಿ ಬೆಳೆಯುವ ಸಂಸ್ಥೆಯಾಗಿರುತ್ತದೆ. ಹೀಗಾಗಿ ಈ ದಾಖಲೀಕರಣ ಯೋಜನೆಯನ್ನು ಮುಂದಿನ ಹಂತಕ್ಕೆ ಒಯ್ಯಲು, ನಿಮ್ಮ ಸಹಾಯ ಅಗತ್ಯವಾಗಿದೆ. ಮೊದಲಿಗೆ, ದಾಖಲೀಕರಿಸಿದ ನಾಟಕಗಳ ಇಂಗ್ಲೀಷ್ ಉಪಶೀರ್ಷಿಕೆಯನ್ನು ಇತರ ಭಾಷೆಗಳಿಗೆ ಭಾಷಾಂತರಿಸಲು ನಿಮ್ಮ ಸಹಾಯ ಬೇಕಿದೆ. ನಿಮಗೆ ಇದರಲ್ಲಿ ಆಸಕ್ತಿ ಇದ್ದಲ್ಲಿ, ನಮ್ಮನ್ನು ಸಂಪರ್ಕಿಸಿರಿ.

ನಾವು ಎಷ್ಟೋ ಪ್ರಮುಖವಾದ, ಮುಖ್ಯ ನಾಟಕಗಳನ್ನು ವಿದ್ಯಾರ್ಥಿಗಳಾಗಿದ್ದಾಗ ಮಾಡಿದ್ದೇವೆ. ಭಾರತದ ಅನೇಕ ಪ್ರಮುಖ ನಿರ್ದೇಶಕರುಗಳ ಜೊತೆಯಲ್ಲೂ ಕೆಲಸ ಮಾಡಿದ್ದೇವೆ. ಆಗೆಲ್ಲಾ ನಾನು ಇಂಥಾದ್ದೊಂದು ದಾಖಲೀಕರಣ ಇದ್ದಿದ್ದರೆ ಎಂದು ಆಶಿಸಿದ್ದೆ. ಈಗ ಆ ಸಮಯ ಕೂಡಿ ಬಂದಿದೆ. ಈ ದಾಖಲೀಕರಣಗಳು ಭವಿಷ್ಯದಲ್ಲಿ ಒಂದು ಅಪೂರ್ವ ಆಕರವಾಗಲಿದೆ ಎಂದು ನಾನು ನಂಬಿದ್ದೇನೆ.

ಎಮ್. ಗಣೇಶ್

ನೀನಾಸಮ್

ತಾರ್ತೂಫ್ ಪ್ರದರ್ಶಿಸಿದ ತಂಡ

ಹೆಗ್ಗೋಡಿನ ನೀನಾಸಮ್ ಬಳಗಕ್ಕೆ ಆಭಾರಿಯಾಗಿದ್ದೇವೆ.

ಯೋಜನೆ ಕಾರ್ಯರೂಪಕ್ಕೆ ಬರಲು ಪ್ರತ್ಯಕ್ಷ-ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.

ದಾಖಲೀಕರಣಕ್ಕೆ ಧನ ಸಹಾಯ ನೀಡಿದವರು

ಅಶೋಕ ವರ್ಧನ | ಇಲಾ ಎಸ್. ಭಟ್ | ಶೈಲಜಾ ಎಸ್. ಭಟ್ | ಎಂ. ಟಿ. ಹೆಬ್ಬಾರ್ | ಎಚ್. ಸುಂದರ ರಾವ್ | ಡಾ. ಕೃಷ್ಣ ಮೋಹನ್ ಪ್ರಭು | ಡಾ. ನಿಸರ್ಗ | ಪ್ರಸನ್ನ ಕೆ.ಆರ್ | ವಚನ್ ಶೆಟ್ಟಿ

ಸಂಚಿ ಫೌಂಡೇಷನ್ ದಾಖಲೀಕರಣ ತಂಡ

ಛಾಯಾಗ್ರಹಣ – ವಿಷ್ಣುಪ್ರಸಾದ್, ಲಕ್ಷ್ಮಣ್ ನಾಯಕ್, ಸೋಮನಾಥ | ಛಾಯಾಗ್ರಹಣ ಸಹಾಯ – ಅವಿನಾಶ್ | ಧ್ವನಿ ಗ್ರಹಣ ಹಾಗೂ ಸಂಸ್ಕರಣ – ಜೇಮಿ ಡಿಸಿಲ್ವ | ಪೂರಕ ಧ್ವನಿ ಗ್ರಹಣ – ಶಿಶಿರ ಕೆ.ವಿ | ನಾಟಕಗಳ ಸಂಕಲನ – ಪ್ರಶಾಂತ್ ಪಂಡಿತ್ | ಸಂದರ್ಶನಗಳು – ಎನ್..ಎಂ ಇಸ್ಮಾಯಿಲ್ |ಸಂದರ್ಶನ ಸಂಕಲನ – ಅಭಯ ಸಿಂಹ | ಅಂತರ್ಜಾಲ ನಿರ್ವಹಣೆ – ಓಂಶಿವಪ್ರಕಾಶ್ | ಉಪಶೀರ್ಷಿಕೆಗಳು – ಅವಿನಾಶ್ ಜಿ. | ಛಾಯಾಗ್ರಹಣ – ಪವಿತ್ರಾ, ಓಂಶಿವಪ್ರಕಾಶ್ | ದಾಖಲೀಕರಣ ನಿರ್ದೇಶನಅಭಯ ಸಿಂಹ

ನೀನಾಸಮ್ ತಿರುಗಾಟ 2015 – ಮೋಲಿಯೇರ್ ನಾಟಕ ‘ತಾರ್ತೂಫ್’

ಅನುವಾದ – ಎ.ಎನ್. ಮೂರ್ತಿರಾವ್ | ವಸ್ತ್ರವಿನ್ಯಾಸ, ಸಂಗೀತ ವಿನ್ಯಾಸ – ಜಗದೀಶ | ವಿನ್ಯಾಸ, ನಿರ್ದೇಶನ – ಎಂ. ಗಣೇಶ್ । ತಾರ್ತೂಫ್ ಪಾತ್ರವರ್ಗ – ಅವಿನಾಶ್ ರೈ ಎಮ್.ಕೆ. (ವಲೇರ್) | ಚಂದನ್ ಎಮ್. (ಕ್ಲೆಯಾಂತ್) | ದಯಾನಂದ್ ಪಲ್ಲವಗೆರೆ (ದಾಮಿ, ಪೋಲೀಸ್ ಅಧಿಕಾರಿ, ಪ್ಲಿಪೆಂತ್) | ನಾಗರಾಜ ಶಿರಸಿ (ತಾರ್ತೂಫ್) | ಬಿಂದು ರಕ್ಷಿದಿ (ಎಲ್ಮೀರ) | ಮನೋಜ್ ಸುಖ್‍ದೇವ್ (ದಾಮಿ,ಪೋಲೀಸ್ ಅಧಿಕಾರಿ, ಪ್ಲಿಪೆಂತ್) | ಮೋಹನ್ ಶೇಣಿ(ಅರ್ಗಾನ್) | ಮಂಜು ಸಿರಿಗೇರಿ (ಲಾಯಲ್) | ಶರತ್ ಎಸ್. (ಮದಾಮ್ ಪರ್ನೆಲ್) | ಶಿಲ್ಪಾ ಎಸ್. (ಮರಿಯಾನ) | ಶ್ರುತಿ ವಿ. ತಿಪಟೂರು (ದೊರೀನ) |ಹನಮಪ್ಪ ಚಂದಪ್ಪ ಚಲವಾದಿ (ಲಾರೆಂಟ್)

ಬೆಳಕುಅವಿನಾಶ್ ರೈ ಎಮ್.ಕೆ., ದಯಾನಂದ್ ಪಲ್ಲವಗೆರೆ, ನಾಗರಾಜ ಸಿರಸಿ | ಬೆಳಕಿನ ನಿರ್ವಹಣೆ – ಮಂಜು ಸಿರಿಗೇರಿ | ರಂಗಸಜ್ಜಿಕೆ – ಮೋಹನ್ ಶೇಣಿ, ಮನೋಜ್ ಸುಖ್‍ದೇವ್, ಶರತ್ ಎಸ್., ಶುಭಕರ | ವೇಷಭೂಷಣ – ಶ್ರುತಿ ವಿ., ಚಂದನ್ ಎಮ್. | ಪ್ರಸಾಧನ – ಶಿಲ್ಪಾ ಎಸ್. | ಪರಿಕರ – ಬಿಂದು ರಕ್ಷಿದಿ | ಸಂಗೀತ/ಧ್ವನಿ – ರವಿಕುಮಾರ ಬಿ. | ರಂಗ ನಿರ್ವಹಣೆ – ಅವಿನಾಶ್ ರೈ ಎಮ್.ಕೆ. | ರಂಗ ಚಲನೆ – ಸೂರಜ್ ಬಿ.ಆರ್. | ನೃತ್ಯವಿನ್ಯಾಸ– ವಿನೀತ್ ಕುಮಾರ್ | ವಸ್ತ್ರವಿನ್ಯಾಸ – ವಿದ್ಯಾ ಹೆಗಡೆ | ಬೆಳಕಿನ ವಿನ್ಯಾಸ – ಕೃಷ್ಣಮೂರ್ತಿ ಎಮ್.ಎಮ್. | ಸಂಚಾರ ವ್ಯವಸ್ಥಾಪಕ – ಹನಮಪ್ಪ ಚಂದಪ್ಪ ಚಲವಾದಿ | ಕಛೇರಿ ನಿರ್ವಹಣೆಶ್ರೀಕಾಂತ ಜಿ. ಆರ್. | ಯೋಜನೆ ಮತ್ತು ನಿರ್ವಹಣೆ – ಶ್ರೀಪಾದ ಟಿ. ಭಾಗವತ್

ಸಂಚಿ ಫೌಂಡೇಶನ್

ಸಂಚಿ ಫೌಂಡೇಶನ್ (ನೋ) ನೀನಾಸಮ್ ಬಳಗದೊಂದಿಗೆ ಈ ಯೋಜನೆಗೆ ಕೈ-ಜೋಡಿಸಿದೆ. ಸಂಚಿ ಫೌಂಡೇಶನ್ ಲಾಭರಹಿತ ಸಂಸ್ಥೆಯಾಗಿದ್ದು, ದೃಶ್ಯ-ಶ್ರಾವ್ಯ ಪರಂಪರೆಯ ದಾಖಲೀಕರಣದ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಂಚಿ ಫೌಂಡೇಶನ್ನಿಗೆ ಈ ಕ್ಷೇತ್ರದಲ್ಲಿ ಅಪಾರ ಅನುಭವ ಇರುವುದಲ್ಲದೇ, ತಜ್ಞರ ಬೆಂಬಲವೂ ಇದೆ.

ಈ ಯೋಜನೆಗೆ ಧನ ಸಹಾಯ ನೀಡಿ ಬೆಂಬಲಿಸಿ

ಈ ಯೋಜನೆಗೆ ಅಗತ್ಯ ಹಣವನ್ನು ಸಮುದಾಯದ ಬೆಂಬಲದಿಂದಲೇ ಸಂಗ್ರಹಿಸುವ ಆಶಯ ಸಂಚಿ ಫೌಂಡೇಶನ್ನಿಗೆ ಇದೆ. ಎಲ್ಲಾ ದಾನಿಗಳಿಗೂ ಸಂಚಿ ಫೌಂಡೇಶನ್ನಿನ ಕಡೆಯಿಂದ ರಶೀದಿ ದೊರೆಯುತ್ತದೆ. ಸಂಚಿಗೆ ನೀಡಿದ ದೇಣಿಗೆಗಳು ಆದಾಯ ತೆರಿಗೆಯಲ್ಲಿ ೮೦ಜಿ ವಿನಾಯಿತಿಯನ್ನೂ ಪಡೆಯುತ್ತವೆ. ಸಂಚಿಯ ಈ ಕೆಲಸವನ್ನು ಮುಂದುವರೆಸಿಕೊಂಡು ಹೋಗಲು ಸಹಾಯ ಮಾಡಿ, ನಮ್ಮನ್ನು ಬೆಂಬಲಿಸಿ. ನಿಮಗೆ ಸಾಧ್ಯವಾದಷ್ಟು ದೇಣಿಗೆಯನ್ನು ದಯವಿಟ್ಟು ನೀಡಿ.