ಒರೆಸ್ತಿಸ್ ಪುರಾಣ
ಕಥಾಸಾರಾಂಶ ಒರೆಸ್ತಿಸ್ ಪುರಾಣ ಏಸ್ಕೈಲಸ್ ಬರೆದ ನಾಟಕತ್ರಿವಳಿಯ ಸಂಕ್ಷೇಪಿತ ರೂಪ. ಟ್ರಾಯ್ ಯುದ್ಧದಲ್ಲಿ ಗೆದ್ದು ಹಿಂದಿರುಗಿ ಬಂದ ದೊರೆ ಅಗಮೆಮ್ನಾನ್ ತನ್ನ ಹೆಂಡತಿ ಕ್ಲೈಟಮ್ನೆಸ್ಟ್ರಾ ಮತ್ತು ಆಕೆಯ ಪ್ರಿಯಕರ ಕೂಡಿ ಮಾಡಿದ ಸಂಚಿಗೆ ಬಲಿಯಾಗುವುದು ಮೊದಲ ನಾಟಕದ ಕಥೆ. ಎರಡನೆಯ ನಾಟಕದಲ್ಲಿ, ಅಗಮೆಮ್ನಾನ್ ಮಕ್ಕಳು ಎಲೆಕ್ಟ್ರಾ ಮತ್ತು ಒರೆಸ್ಟಸ್ ತಂದೆಯ ಕೊಲೆಯ ಪ್ರತಿಕಾರಕ್ಕೆ ಕಾಯುತ್ತಾರೆ; ಒರೆಸ್ಟಸ್ ತಾಯಿಯನ್ನು ಕೊಲ್ಲುತ್ತಾನೆ. ಮೂರನೆಯ ನಾಟಕದ ವಸ್ತು ಈ ಜೋಡಿ ಪಾತಕಗಳ ನ್ಯಾಯ ನಿರ್ಣಯ. ಈ ನ್ಯಾಯಸ್ಥಾನದಲ್ಲಿ ಹಳೆಯ-ಹೊಸ ಮಾನದಂಡಗಳು ಮುಖಾಮುಖಿಯಾಗುತ್ತವೆ. ಹಳೆಯ ಪೀಳಿಗೆಯ ಎರೀನಿಯಾ ದೇವತೆಗಳ ಪ್ರಕಾರ ಕ್ಲೈಟಮ್ನೆಸ್ಟ್ರಾ ಗಂಡನನ್ನು ಕೊಂದದ್ದು ಮಹಾಪಾಪವಲ್ಲಲ; ಯಾಕೆಂದರೆ ಅವನು ಅವಳಿಗೆ ‘ರಕ್ತಸಂಬಂಧಿ’ಯಲ್ಲ. ಆದರೆ ಹೊಸ ಮೌಲ್ಯಗಳ ಪ್ರಕಾರ ಅದು ಕುಟುಂಬದ ಯಜಮಾನನ ಕೊಲೆ; ಹಾಗಾಗಿ ಶಿಕ್ಷಾರ್ಹ. ಎಸ್ಕ್ಲೈಲಸನ ನಾಟಕದಲ್ಲಿ ಈ ಪರ ವಿರೋಧದ ಅಭಿಪ್ರಾಯಗಳು ಸಮಸಮವಾಗಿ ಕಡೆಗೆ ಅಥೆನಾ ತನ್ನ ವಿಶೇಷ ಮತದಿಂದ ಒರೆಸ್ಟಸ್ ಪಾರಾಗುವಂತೆ ಮಾಡುತ್ತಾಳೆ; ಎರೀನಿಯಾ ದೇವತೆಗಳನ್ನು ಸಮಾಧಾನಪಡಿಸುತ್ತಾಳೆ. ಹೀಗೆ, ಮಾತೃ-ಪಿತೃ ಪ್ರಧಾನ ವ್ಯವಸ್ಥೆಗಳ, ರಕ್ತ-ಕುಟುಂಬ ಸಂಬಂಧಗಳ, ಕುಲ-ರಾಜ್ಯಗಳ ನಡುವೆ ಹೊಂದಾಣಿಕೆ ಸಾಧ್ಯವೆಂಬ ಆಶಯವನ್ನು ನಾಟಕ ಮುಂದಿಡುತ್ತದೆ. ಈ ನಾಟಕದ ವಸ್ತು ‘ನೆಲಮಣ್ಣಿನ ಸತ್ಯದ ಮೇಲೆ ಗಂಡು ದರ್ಪದ ನ್ಯಾಯವು ನೆಲೆಗೊಂಡ ಕತೆಯಾಗಿ ಇತಿಹಾಸದಲ್ಲಿ ದಾಖಲಾಗುತ್ತದೆ’ ಎಂದು ಈ ನಾಟಕದ ಪಾತ್ರವೊಂದು ಹೇಳುತ್ತದೆ. ಈ ಮಾತುಗಳನ್ನು ನಮ್ಮ ಕಾಲದೇಶಗಳಿಗೆ ಅನುವರ್ತಿಸುವ ಒಂದು ರಂಗಪ್ರಯತ್ನವೇ ‘ಒರೆಸ್ತಿಸ್ ಪುರಾಣ’
ನೀನಾಸಮ್ ಬಳಗ
೧೯೪೯ರಲ್ಲಿ ಆರಂಭವಾದ ನೀನಾಸಮ್ ಇಂದು ಹಲವು ಜ್ಞಾನಶಾಖೆಗಳಿಗೆ ಹಬ್ಬಿ ನಿಂತಿದೆ. ಅದರ ಒಂದು ಅತ್ಯಂತ ಪ್ರಮುಖ ಹಾಗೂ ಹಳೆಯ ಶಾಖೆ, ಸ್ಥಳೀಯ ನಾಟಕ ತಂಡ. ನಾಟಕದಲ್ಲಿ ಆಸಕ್ತಿಯಿರುವ ಸ್ಥಳೀಯರು ಜೊತೆ ಸೇರಿ ಆರಂಭದ ದಿನಗಳಿಂದಲೂ ಸರಾಸರಿ ವರ್ಷಕ್ಕೆ ಒಂದರಂತೆ ನಾಟಕಗಳನ್ನು ಅಭ್ಯಸಿಸಿ ಪ್ರದರ್ಶಿಸುತ್ತಾ ಬಂದಿದ್ದಾರೆ. ‘ಷಹಜಹಾನ್’, ‘ಸಂಗ್ಯಾ ಬಾಳ್ಯಾ’, ‘ಚೋಮನ ದುಡಿ’, ‘ಘಾಸೀರಾಮ್ ಕೋತ್ವಾಲ್’, ‘ತಾಮ್ರ ಪತ್ರ’, ‘ಸಾಹೇಬರು ಬರುತ್ತಾರೆ’, ‘ಹ್ಯಾಮ್ಲೆಟ್’, ‘ಜೋಕುಮಾರ ಸ್ವಾಮಿ’, ‘ಕೆಂಪು ಕಣಗಿಲೆ’, ‘ಮಂತ್ರಶಕ್ತಿ’, ‘ನೂರ್ಜಹಾನ್’, ‘ವೆನಿಸ್ಸಿನ ವ್ಯಾಪಾರಿ’, ತಲಕಾಡುಗೊಂಡ’, ‘ಕ್ರಮವಿಕ್ರಮ’, ‘ಚೆರ್ರಿ ತೋಪು’, ‘ಸದ್ದು, ವಿಚಾರಣೆ ನಡೆಯುತ್ತಿದೆ’, ‘ಲಿಯರ್ ಲಹರಿ’, ‘ಆಕಾಶ ಬುಟ್ಟಿ’, ‘ಅಗಲಿದ ಅಲಕೆ’, ‘ಶಿಶಿರ ವಸಂತ’ ಇತ್ಯಾದಿ ಅನೇಕ ಪ್ರಮುಖ ನಾಟಕಗಳು ಈ ತಂಡದ ಮೂಲಕ ಪ್ರದರ್ಶಿತವಾಗಿವೆ. ನಾಟಕಗಳನ್ನು ಸ್ಥಳೀಯ ನಿರ್ದೇಶಕರು ನಿರ್ದೇಶಿಸುವುದಲ್ಲದೇ, ಅನೇಕ ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರಖ್ಯಾತಿಯ ಬಿ.ವಿ ಕಾರಂತ, ಚಂದ್ರಶೇಖರ ಕಂಬಾರ, ಪ್ರಸನ್ನ, ಪ್ರಕಾಶ್ ಬೆಳವಾಡಿ, ರಘುನಂದನ, ಚನ್ನಕೇಶವ ಇತ್ಯಾದಿ ಅನೇಕ ನಿರ್ದೇಶಕರು ನಿರ್ದೇಶಿಸಿದ್ದಾರೆ. ಈ ನಾಟಕಗಳು ಸಾಮಾನ್ಯವಾಗಿ ಹೆಗ್ಗೋಡಿನಲ್ಲಿ ಮತ್ತು ಸುತ್ತಲಿನ ಕೆಲವಾರು ಸ್ಥಳಗಳಲ್ಲಿ ಪ್ರದರ್ಶನಗೊಳ್ಳುತ್ತದೆ. ಇದಲ್ಲದೇ ಕರ್ನಾಟಕದ ಅನೇಕ ಭಾಗಗಳಲ್ಲೂ ಹಲವು ಪ್ರದರ್ಶನಗಳು ಆಗಿವೆ.
ಒರೆಸ್ತಿಸ್ ಪುರಾಣ ಕುರಿತಾಗಿ ಹೆಚ್ಚಿನ ಮಾಹಿತಿ ಪಡೆದುಕೊಌ
ಈ ನಾಟಕದ ತಾಂತ್ರಿಕ, ಸೃಜನಾತ್ಮಕ ವಿಷಯಗಳನ್ನು ತಿಳಿಯಲು ಈ ಕೆಳಗಿನ ಕೊಂಡಿಗಳನ್ನು ಬಳಸಬಹುದಾಗಿದೆ.
(ಈ ಕೊಂಡಿಗಳು ಪ್ರತ್ಯೇಕ ಯೂ-ಟ್ಯೂಬ್ ವಿಭಾಗಕ್ಕೆ ತಮ್ಮನ್ನು ಕರೆದೊಯ್ಯುತ್ತವೆ.)
ಸಮುದಾಯದ ಸಹಭಾಗಿತ್ವ
ವೀಡಿಯೋ ಎಂದಿಗೂ ರಂಗದ ಅನುಭವವನ್ನು ಕೊಡಲಾರದು ಎಂದೇ ನನ್ನ ಭಾವನೆ. ಹೀಗಾಗಿ ಈ ದಾಖಲೀಕರಣ ರಂಗದ ಪರ್ಯಾಯವಾಗಲು ಸಾಧ್ಯವಿಲ್ಲ. ಆದರೆ ಇದು ವಿದ್ಯಾರ್ಥಿಗಳಿಗೆ ಒಂದು ಅಗತ್ಯದ ಪಠ್ಯವಾಗುತ್ತದೆ. ನನಗೆ ಈ ರೀತಿಯ ದಾಖಲೀಕರಣದ ನಿಜವಾದ ಉಪಯೋಗ ಅಲ್ಲಿ ಕಾಣಿಸುತ್ತದೆ.
ಕ್ರಿಯೇಟೀವ್ ಕಾಮನ್ಸ್ ಪರವಾನಗಿ
ಒರೆಸ್ತಿಸ್ ಪುರಾಣದ ತಂಡ
ಹೆಗ್ಗೋಡಿನ ನೀನಾಸಮ್ ಬಳಗಕ್ಕೆ ಆಭಾರಿಯಾಗಿದ್ದೇವೆ.
ಯೋಜನೆ ಕಾರ್ಯರೂಪಕ್ಕೆ ಬರಲು ಪ್ರತ್ಯಕ್ಷ-ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.ದಾಖಲೀಕರಣಕ್ಕೆ ಧನ ಸಹಾಯ ನೀಡಿದವರು
ಅಶೋಕ ವರ್ಧನ | ಇಲಾ ಎಸ್. ಭಟ್ | ಶೈಲಜಾ ಎಸ್. ಭಟ್ | ಎಂ. ಟಿ. ಹೆಬ್ಬಾರ್ | ಎಚ್. ಸುಂದರ ರಾವ್ | ಡಾ. ಕೃಷ್ಣ ಮೋಹನ್ ಪ್ರಭು | ಡಾ. ನಿಸರ್ಗ | ಪ್ರಸನ್ನ ಕೆ.ಆರ್ | ವಚನ್ ಶೆಟ್ಟಿ
ಸಂಚಿ ಫೌಂಡೇಷನ್ ದಾಖಲೀಕರಣ ತಂಡ
ಛಾಯಾಗ್ರಹಣ – ವಿಷ್ಣುಪ್ರಸಾದ್, ಲಕ್ಷ್ಮಣ್ ನಾಯಕ್, ಸೋಮನಾಥ | ಛಾಯಾಗ್ರಹಣ ಸಹಾಯ – ಅವಿನಾಶ್ | ಧ್ವನಿ ಗ್ರಹಣ ಹಾಗೂ ಸಂಸ್ಕರಣ – ಜೇಮಿ ಡಿಸಿಲ್ವ | ಪೂರಕ ಧ್ವನಿ ಗ್ರಹಣ – ಶಿಶಿರ ಕೆ.ವಿ | ನಾಟಕಗಳ ಸಂಕಲನ – ಪ್ರಶಾಂತ್ ಪಂಡಿತ್ | ಸಂದರ್ಶನಗಳು – ಎನ್.ಎ.ಎಂ ಇಸ್ಮಾಯಿಲ್ |ಸಂದರ್ಶನ ಸಂಕಲನ – ಅಭಯ ಸಿಂಹ | ಅಂತರ್ಜಾಲ ನಿರ್ವಹಣೆ – ಓಂಶಿವಪ್ರಕಾಶ್ | ಉಪಶೀರ್ಷಿಕೆಗಳು – ಅವಿನಾಶ್ ಜಿ. | ಛಾಯಾಗ್ರಹಣ – ಪವಿತ್ರಾ, ಓಂಶಿವಪ್ರಕಾಶ್ | ದಾಖಲೀಕರಣ ನಿರ್ದೇಶನ – ಅಭಯ ಸಿಂಹ
ನೀನಾಸಮ್ ನಾಟಕ 2015 – ಒರೆಸ್ತಿಸ್ ಪುರಾಣ
ಏಸ್ಕೆ ೈಲಸ್‍ನ ಒರೆಸ್ಟಿಯಾ ನಾಟಕ ತ್ರಿವಳಿಯನ್ನು ಆಧರಿಸಿದ, ಡಾ| ವಿಜಯಾ ಗುತ್ತಲ ಅವರ ಕನ್ನಡ ಅನುವಾದ | ನಿರ್ದೇಶನ – ಬಿ.ಆರ್. ವೆಂಕಟರಮಣ ಐತಾಳ | ಪಾತ್ರವರ್ಗ – (ಅಗಮೆಮ್ನೋನ್) ಸುಬ್ಬಣ್ಣ ನಂದ್ರೆ, (ಕ್ಲಿತೆಮ್ನಿಸ್ತ್ರ) ವಿದ್ಯಾ ಹೆಗಡೆ, ಸುಶೀಲಾ ಹೆಗಡೆ | (ಏಗಿಸ್ತೋಸ್) ನಾಗರಾಜ ಎಂ.ಎಸ್. | (ಕಸಾಂದ್ರಾ) ಸೌರಭ ಕೆ., ಸುಹಾನಾ ಎಂ. | (ಒರೆಸ್ತಿಸ್) ಚನ್ನಕೇಶವ ಎಸ್. ಎಚ್., ಚೈತ್ರಕುಮಾರ್ ಮಾವಿನಕುಳಿ | (ಎಲೆಕ್ಟ್ರಾ) ಅರ್ಪಿತಾ ಬಿ., ವಿಭಾ ಐತಾಳ |(ಅಪೆÇೀಲೊ) ಕಿರಣ ಎಸ್. ಪುರಪ್ಪೆಮನೆ | (ಅಥೀನಾ) ಮಧುನಿಶಾ | (ಹರ್ಮಿಸ್) ಶಂಕರ ಭಟ್ | (ದೂತ) ರಮೇಶ ಎನ್.ಎಂ. ನಂದ್ರೆ, ನವೀನ್ ಮಳವಳ್ಳಿ | (ಕಾವಲುಗಾರರು) ಜಯಪ್ರಕಾಶ್ ಶೆಟ್ಟಿ ಹೆಬ್ಬೆ ೈಲು, ರಾಘವೇಂದ್ರ ಎನ್. ಕಲ್ಕೊಪ್ಪ, ನವೀನ್ ಮಳವಳ್ಳಿ | (ಪಿಲಾದಿಸ್) ನವೀನ್ ಮಳವಳ್ಳಿ |(ಸೇವಕ) ಗಣೇಶ ಎಚ್.ಬಿ. | (ಬಾಲಕ ಒರೆಸ್ತಿಸ್) ಸಮರ್ಥ ಪಿ.ಎನ್. | (ಮೇಳ) ಶಂಕರ ಭಟ್, ರಮೇಶ ಎನ್.ಎಂ. ನಂದ್ರೆ, ಜಯಪ್ರಕಾಶ್ ಶೆಟ್ಟಿ ಹೆಬ್ಬೈಲು, ನವೀನ್ ಮಳವಳ್ಳಿ, ಕಿರಣ ಎಸ್. ಪುರಪ್ಪೆಮನೆ, ಚೈತ್ರಕುಮಾರ್ ಮಾವಿನಕುಳಿ, ಸಂಪದ ಎಸ್. ಭಾಗವತ, ದರ್ಶನ್ ಎಚ್.ಎಸ್., ರಾಘವೇಂದ್ರ ಎನ್.ಕಲ್ಕೊಪ್ಪ, ಶ್ರೀಧನ ಬಿ.ಎನ್. | (ಉಗ್ರದೇವತೆಗಳು) ವಿದ್ಯಾ ಹೆಗಡೆ, ದರ್ಶನ್ ಎಚ್.ಎಸ್., ಸಂಪದ ಎಸ್. ಭಾಗವತ, ಸೌರಭ ಕೆ., ಅರ್ಪಿತಾ ಬಿ., ಸುಹಾನಾ ಎಂ., ವಿಭಾ ಐತಾಳ, ಮಯೂರ ಹೆಗಡೆ, ಸಮರ್ಥ ಪಿ.ಎನ್. | (ಹಿರಿಯ ನಾಗರಿಕರು) ನರಹರಿ ಎಂ.ವಿ., ಸಿದ್ದವೀರಪ್ಪ ಎಂ.ಜಿ., ನಾರಾಯಣ ಸ್ವಾಮಿ ಪಿ.ಕೆ.,ಸುಬ್ಬಣ್ಣ ನಂದ್ರೆ, ರಮೇಶ ಎನ್.ಎಂ. ನಂದ್ರೆ, ನಾಗರಾಜ ಎಂ.ಎಸ್., ಶಂಕರ ಭಟ್, ಶ್ರೀಧನ ಬಿ.ಎನ್., ರಂಗನಿರ್ವಹಣೆ, ಎಂ.ಎಸ್. ನಾಗರಾಜ
ರಂಗಸಜ್ಜಿಕೆ – ಜಯಪ್ರಕಾಶ್ ಶೆಟ್ಟಿ ಹೆಬ್ಬೈಲು, ಸುಬ್ಬಣ್ಣ ನಂದ್ರೆ, ಕಿರಣ ಎಸ್. ಪುರಪ್ಪೆಮನೆ, ಚನ್ನಕೇಶವ ಎಸ್. ಎಚ್., ಶ್ರೀಧನ ಬಿ.ಎನ್. | ವಸ್ತ್ರ – ವಿದ್ಯಾ ಹೆಗಡೆ, ಸುಶೀಲಾ ಹೆಗಡೆ, ಅರ್ಪಿತ ಬಿ., ವಿಭಾ ಐತಾಳ | ಬೆಳಕು – ನವೀನ್ ಮಳವಳ್ಳಿ, ರಾಘವೇಂದ್ರ ಎನ್. ಕಲ್ಕೊಪ್ಪ, ಚನ್ನಕೇಶವ ಎಸ್.ಎಚ್., ಸಂಪದ ಎಸ್. ಭಾಗವತ್, ಗಣೇಶ ಎಚ್.ಬಿ., ದರ್ಶನ್ ಎಚ್.ಎಸ್., ನಾರಾಯಣ ಸ್ವಾಮಿ ಪಿ.ಕೆ. | ಪರಿಕರ – ಚೈತ್ರಕುಮಾರ್ ಮಾವಿನಕುಳಿ, ಶಂಕರ ಭಟ್, ಸುಹಾನಾ ಎಂ., ರಮೇಶ ಎನ್.ಎಂ. ನಂದ್ರೆ, ಸೌರಭ ಕೆ. | ಸಂಗೀತ – ಎಂ. ಪಿ. ಹೆಗಡೆ, ಭಾರ್ಗವ ಕೆ. ಎನ್. | ಪ್ರಚಾರ – ಸಿದ್ದವೀರಪ್ಪ ಎಂ. ಜಿ., ಶ್ರೀಧನ್ ಬಿ. ಎನ್.,ನರಹರಿ ಎಂ.ವಿ. | ರಂಗ ವಿನ್ಯಾಸ – ಮಂಜು ಕೊಡಗು | ಬೆಳಕಿನ ವಿನ್ಯಾಸ ಮತ್ತು ನಿರ್ವಹಣೆ – ಎಂ. ಎಂ. ಕೃಷ್ಣಮೂರ್ತಿ | ಸಹಾಯ – ಅವಿನಾಶ್ ರೈ |ನೃತ್ಯ ವಿನ್ಯಾಸ – ಸೂರಜ್ ಬಿ.ಆರ್. | ತಾಂತ್ರಿಕ ನೆರವು – ಹರೀಶ ಛಲವಾದಿ, ಪ್ರವೀಣ್ ಸುಳ್ಯ, ರಮೇಶ ಪಿ.ಕೆ., ಫಣಿಯಮ್ಮ ಎಚ್. ಎಸ್.
ಸಂಚಿ ಫೌಂಡೇಶನ್
ಸಂಚಿ ಫೌಂಡೇಶನ್ (ನೋ) ನೀನಾಸಮ್ ಬಳಗದೊಂದಿಗೆ ಈ ಯೋಜನೆಗೆ ಕೈ-ಜೋಡಿಸಿದೆ. ಸಂಚಿ ಫೌಂಡೇಶನ್ ಲಾಭರಹಿತ ಸಂಸ್ಥೆಯಾಗಿದ್ದು, ದೃಶ್ಯ-ಶ್ರಾವ್ಯ ಪರಂಪರೆಯ ದಾಖಲೀಕರಣದ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಂಚಿ ಫೌಂಡೇಶನ್ನಿಗೆ ಈ ಕ್ಷೇತ್ರದಲ್ಲಿ ಅಪಾರ ಅನುಭವ ಇರುವುದಲ್ಲದೇ, ತಜ್ಞರ ಬೆಂಬಲವೂ ಇದೆ.
ಈ ಯೋಜನೆಗೆ ಧನ ಸಹಾಯ ನೀಡಿ ಬೆಂಬಲಿಸಿ
ಈ ಯೋಜನೆಗೆ ಅಗತ್ಯ ಹಣವನ್ನು ಸಮುದಾಯದ ಬೆಂಬಲದಿಂದಲೇ ಸಂಗ್ರಹಿಸುವ ಆಶಯ ಸಂಚಿ ಫೌಂಡೇಶನ್ನಿಗೆ ಇದೆ. ಎಲ್ಲಾ ದಾನಿಗಳಿಗೂ ಸಂಚಿ ಫೌಂಡೇಶನ್ನಿನ ಕಡೆಯಿಂದ ರಶೀದಿ ದೊರೆಯುತ್ತದೆ. ಸಂಚಿಗೆ ನೀಡಿದ ದೇಣಿಗೆಗಳು ಆದಾಯ ತೆರಿಗೆಯಲ್ಲಿ ೮೦ಜಿ ವಿನಾಯಿತಿಯನ್ನೂ ಪಡೆಯುತ್ತವೆ. ಸಂಚಿಯ ಈ ಕೆಲಸವನ್ನು ಮುಂದುವರೆಸಿಕೊಂಡು ಹೋಗಲು ಸಹಾಯ ಮಾಡಿ, ನಮ್ಮನ್ನು ಬೆಂಬಲಿಸಿ. ನಿಮಗೆ ಸಾಧ್ಯವಾದಷ್ಟು ದೇಣಿಗೆಯನ್ನು ದಯವಿಟ್ಟು ನೀಡಿ.