ಅದು ಯಕ್ಷಗಾನದಲ್ಲಿ ಕಲಬೆರಕೆ ಮತ್ತು ಅಧ್ಯಯನಾತ್ಮಕ ಪ್ರಯೋಗಗಳ ನಡುವೆ ಸಾಮಾನ್ಯ ರಸಿಕ ದಿಕ್ಕೇಡಿಯಾಗಿದ್ದ ಕಾಲ (೨೦೦೪). ಅಲ್ಲಿ ನಿರ್ವಿವಾದವಾಗಿ ಅಗ್ರಮಾನ್ಯ ಗುರುವೆಂದು ಹೆಸರಾಂತವರು ಬನ್ನಂಜೆ ಸಂಜೀವ ಸುವರ್ಣ. ಹಾಗೇ ವೃತ್ತಿಪರ ಆದಾಯದ ಲಕ್ಷ್ಯವಿಲ್ಲದ ಏಕೈಕ ಯಕ್ಷಗುರುಕುಲವೆಂದೇ ಹೆಸರು ಹೊತ್ತ ಸಂಸ್ಥೆ ಅವರದೇ ಯಕ್ಷಗಾನ ಕೇಂದ್ರ (ಎಂಜಿಎಂ ಕಾಲೇಜು, ಉಡುಪಿ). ಇವರಿಂದ ಶುದ್ಧರೂಪದ ಯಕ್ಷವ್ಯಾಕರಣವನ್ನೇ ರಸಾತ್ಮಕವಾಗಿ ಮಂಗಳೂರಿನ ಸಾರ್ವಜನಿಕರಿಗೆ ಉಣಬಡಿಸಬೇಕೆಂದೂ ಆ ಪ್ರದರ್ಶನ ಆ ಕಾಲಘಟ್ಟದ ಅತ್ಯುತ್ತಮ ಪ್ರಯೋಗವೆಂದು ದಾಖಲೀಕರಣಕ್ಕೊಳಪಡಿಸಬೇಕೆಂದೂ ಸಂಘಟಕ ತ್ರಯರಾದ ಮಂಟಪ ಮನೋಹರ ಉಪಾಧ್ಯ (ಪಶುವೈದ್ಯ) ಮತ್ತು ಅಶೋಕವರ್ಧನ (ಪುಸ್ತಕ ವ್ಯಾಪಾರಿ) ನಿರ್ಧರಿಸಿದ್ದರ ಫಲ ಈ ಪೂರ್ವರಂಗ ಹಾಗೂ ಯಕ್ಷೋತ್ತಮರ ಕಾಳಗ. ಇದನ್ನು ಅಷ್ಟೇ ನಿರ್ಮಮವಾಗಿ ಒಡ್ಡಿಸಿಕೊಂಡು ಯಕ್ಷಗಾನ ಕೇಂದ್ರವನ್ನು ಚತುರ್ಥ ಭಾಗೀದಾರ ಎಂದು ಗುರುತಿಸಿದರೆ ತಪ್ಪಾಗಲಾರದು.

Support Sanchi Efforts

You can support “Sanchi Foundation” by donating a small amount. All donations to Sanchi Foundation (R) get 80G income tax exemption.

Creative Commons License

All Documentation Works by Sanchi Foundation, Bengaluru is licensed under a Creative Commons Attribution 4.0 International License.

ಸಂಚಿ ಫೌಂಡೇಷನ್ ಮಾಸಿಕ ಪತ್ರಿಕೆಗೆ ಚಂದಾದಾರರಾಗಿ‍

Opt for Sanchi Monthly News paper

ಸಂಚಿ ಫೌಂಡೇಷನ್ ಮಾಸಿಕ ಪತ್ರಿಕೆಗೆ ಚಂದಾದಾರರಾಗಿ‍

You have Successfully Subscribed!