ಪಾರಂಪರಿಕ ಮತ್ತು ಸಮಕಾಲೀನ ಕಲೆ ಮತ್ತು ಜ್ಞಾನ ಶಾಖೆಗಳ ದಾಖಲೀಕರಣದ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿರುವ ‘ಸಂಚಿ ಫೌಂಡೇಶನ್‘ ಆರಂಭಿಸಿರುವ ‘ಜ್ಞಾನ ಸರಣಿ‘ ಉಪನ್ಯಾಸ ಮಾಲಿಕೆಯ ಎರಡನೆಯ ಉಪನ್ಯಾಸವನ್ನು ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ಕ್ಷೇತ್ರದ ವಿದ್ವಾಂಸ ಹಾಗೂ ಕನ್ನಡ ನಾಡು ಮತ್ತು ನುಡಿಗೆ ಸಂಬಂದಿಸಿದಂತೆ ಅತ್ಯುನ್ನತ ಸಂಶೋಧನೆಗಳನ್ನು ನಡೆಸಿರುವ ಪ್ರೊ.ಎಸ್.ಶೆಟ್ಟರ್ ನೀಡುತ್ತಿದ್ದಾರೆ. ಉಪನ್ಯಾಸದ ವಿಷಯ ‘ಜನಸಮುದಾಯದ ಇತಿಹಾಸ ಪ್ರಜ್ಞೆ’
ಪ್ರೊ. ಶೆಟ್ಟರ್ ಅವರು ಇತಿಹಾಸ, ಮಾನವಶಾಸ್ತ್ರ, ದರ್ಶನಶಾಸ್ತ್ರ ಮತ್ತು ಹಳೆಗನ್ನಡ ಕಾವ್ಯಗಳ ಕುರಿತಂತೆ 20ಕ್ಕೂ ಹೆಚ್ಚು ವಿದ್ವತ್ಪೂರ್ಣ ಗ್ರಂಥಗಳನ್ನು ರಚಿಸಿದ್ದಾರೆ. ಅವರ ‘ಶಂಗಂ ತಮಿಳಗಂ’ ಮತ್ತು ಇತ್ತೀಚಿನ ‘ಹಳಗನ್ನಡ’ ಪುಸ್ತಕಗಳು ಕನ್ನಡದ ಪ್ರಾಚೀನತೆಯ ಕುರಿತಂತೆ ಅತಿ ವಿಶಿಷ್ಟ ಒಳನೋಟಗಳನ್ನು ನೀಡುವ ಕೃತಿಗಳು.
Prof. S. Settar spoke about “History awareness in Commons” at National College Basavanagudi during Sanchi Foundation’s “Jnana SaraNi (ಜ್ಞಾನ ಸರಣಿ) 2
Your Voice