ಕ್ಯಾಮರಾ ಕಣ್ಣು ಹಾಗೂ ಪ್ರೇಕ್ಷಕನ ಕುರ್ಚಿ

ಕ್ಯಾಮರಾ ಕಣ್ಣು ಹಾಗೂ ಪ್ರೇಕ್ಷಕನ ಕುರ್ಚಿ

ಅತ್ತ ನನ್ನ ತಂದೆಯ (ಅಶೋಕ ವರ್ಧನ) ಬ್ಲಾಗಿನಲ್ಲಿ ಯಕ್ಷಗಾನ ಪ್ರದರ್ಶನವೊಂದಕ್ಕೆ ‘ಕೇಳಿ’ ಹೊಡೆಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಯಕ್ಷಗಾನ ದಾಖಲೀಕರಣದ ಕುರಿತಾಗಿ ಒಂದಿಷ್ಟು ಯೋಚನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣ ಎನಿಸಿತು ಅದಕ್ಕೇ ಇಲ್ಲಿ ಬಂದೆ ನಾನು. ಇಂದು, ಅನೇಕ ಸಂದರ್ಭಗಳಲ್ಲಿ ನೃತ್ಯ ಪ್ರದರ್ಶನಗಳನ್ನು, ವೀಡಿಯೋದಲ್ಲಿ...

ಭಾಮಿನಿ ಪ್ರಯೋಗದ ವಿಶೇಷ ದಾಖಲೀಕರಣ

ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಪ್ರದರ್ಶನಕ್ಕೆ ಸಾವಿರ ಸಂಭ್ರಮ ನಡೆದಿದ್ದ ಸಂದರ್ಭದಲ್ಲಿ, ಅವರ ಪ್ರದರ್ಶನದ ದಾಖಲೆಯಾಗಿದೆಯೇ ಇಲ್ಲವೇ? ಇಂಥದ್ದೊಂದು ದಾಖಲೆ ಬೇಕಲ್ಲವೇ? ಎಂದು ಯೋಚನೆ ತಲೆಯಲ್ಲಿ ಕೊರೆಯಲಾರಂಭಿಸಿತು. ಅವರನ್ನು ಒಂದೆರಡು ಬಾರಿ ಭೇಟಿ ಮಾಡಿಯಷ್ಟೇ ಗೊತ್ತಿತ್ತು. ಅಂಥಾ ದೊಡ್ಡ ಕಲಾವಿದರಿಗೆ ನೇರ ದೂರವಾಣಿಸುವಷ್ಟು...