ನೀನಾಸಮ್, ಹೆಗ್ಗೋಡು ಹಾಗೂ ಸಂಚಿ ಫೌಂಡೇಶನ್ ಜೊತೆಯಾಗಿ ನಡೆಸುವ ಕಿರುಚಿತ್ರ ಕಾರ್ಯಾಗಾರ ಮೂರನೆಯ ವರ್ಷದ ಕಾರ್ಯಾಗಾರಕ್ಕೆ ಮತ್ತೆ ಸಿದ್ಧವಾಗಿದೆ. ೨೦೧೭ನೇ ಇಸವಿಯ ಜನವರಿ ೨೧ರಿಂದ ೨೬ರವರೆಗೆ ಹೆಗ್ಗೋಡಿನಲ್ಲಿ ನಡೆಯಲಿರುವ ಈ ಸನಿವಾಸ ಶಿಬಿರಕ್ಕೆ ಈಗ ಅರ್ಜಿಗಳನ್ನು ಆಹ್ವಾನಿಸುತ್ತಿದ್ದೇವೆ. ಡಿಸೆಂಬರ್ ಹದಿನೈದಕ್ಕೆ ನಿಮ್ಮ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಶಿಬಿರದಲ್ಲಿನ ಊಟ, ವಸತಿ, ಪಾಠ ಸೇರಿದಂತೆ ಖರ್ಚುಗಳಿಗಾಗಿ ೨೦,೦೦೦ರೂ (ಇಪ್ಪತ್ತು ಸಾವಿರ ರೂಪಾಯಿಗಳು) ಪ್ರವೇಶಧನವಿರುತ್ತದೆ. ಕೇವಲ ೨೦ ಅಭ್ಯರ್ಥಿಗಳಿಗೆ ಅವಕಾಶವಿರುತ್ತದೆ. ಆಸಕ್ತಿಯಿದ್ದಲ್ಲಿ, ಕೂಡಲೇ ಈ ಕೆಳಗಿನ ಅರ್ಜಿಯನ್ನು ತುಂಬಿಸಿ.
೨೧ ಜನವರಿಯಿಂದ ೨೬ ಜನವರಿ ೨೦೧೭
ನೀನಾಸಮ್, ಹೆಗ್ಗೋಡಿನಲ್ಲಿ
ಕಾರ್ಯಾಗಾರ ಶುಲ್ಕ: ೨೦,೦೦೦ರೂ (ಇಪ್ಪತ್ತು ಸಾವಿರ ರೂಪಾಯಿಗಳು)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ೧೫ ಡಿಸೆಂಬರ್ ೨೦೧೬
Short filmmaking workshop 2015
Short filmmaking workshop 2016